ವಾಡಿ: ಬಿಜೆಪಿ ಕಚೇರಿಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ….ಸುದ್ದಿ ಸಂಗ್ರಹ ವಾಡಿ
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ದೇವಶಿಲ್ಪಿ ವಿಶ್ವಕರ್ಮರ ಭಾವಚಿತ್ರಕ್ಕೆ ಮುಖಂಡರು ಪುಷ್ಪ ನಮನ ಸಲ್ಲಿಸಿದರು…..ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಹಿರಿಯರು ಹಾಗೂ ಬಿಜೆಪಿ ಮುಖಂಡ ಬಸವರಾಜ ಪಂಚಾಳ ಮಾತನಾಡಿ, ವಿಶ್ವಕರ್ಮ ಜಯಂತಿಯು ಒಂದು ಧಾರ್ಮಿಕ ಆಚರಣೆ ಜೊತೆಗೆ ಶ್ರಮ ಗೌರವವನ್ನು ಸಾರುವ ದಿನವಾಗಿದೆ ಎಂದರು…..ಸಮಾಜದ ಯಶಸ್ಸಿನ ಹಿಂದೆ ಕರಕುಶಲಕರ್ಮಿಗಳು, ಶಿಲ್ಪಿಗಳು, ಎಂಜಿನಿಯರ್ಗಳು, ಕಾರ್ಖಾನೆಯ ಕಾರ್ಮಿಕರು ಮತ್ತು ಮೆಕ್ಯಾನಿಕ್ಗಳ ಶ್ರಮವಿದೆ. ರಸ್ತೆಯಲ್ಲಿ ಕೆಲಸ ಮಾಡುವ ಕಾರ್ಮಿಕನಿಂದ ಹಿಡಿದು ದೊಡ್ಡ ತಂತ್ರಜ್ಞಾನ ರೂಪಿಸುವ ಎಂಜಿನಿಯರ್ವರೆಗೆ ಪ್ರತಿಯೊಬ್ಬರ ಕೆಲಸವೂ ಪೂಜನೀಯವಾದುದು ಎಂಬುದನ್ನು ಈ ದಿನ ನಮಗೆ ನೆನಪಿಸುತ್ತದೆ ಎಂದರು…..ದೇಶದ ಪ್ರಗತಿಗೆ ಶ್ರಮಿಸುವ ಪ್ರತಿಯೊಬ್ಬ ಶ್ರಮಿಕನನ್ನು ಗೌರವಿಸೋಣ. ಭಗವಾನ್ ವಿಶ್ವಕರ್ಮರು ಎಲ್ಲರಿಗೂ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದರು….ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ,
ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಭೀಮಶಾ ಜಿರೋಳ್ಳಿ, ಅಶೋಕ ಹರನಾಳ, ಅರ್ಜುನ ಕಾಳೆಕರ, ಹರಿ ಗಲಾಂಡೆ, ಅಶೋಕ ಪವಾರ, ರಿಚರ್ಡ್ ಮಾರೆಡ್ಡಿ, ಪ್ರಕಾಶ ಪುಜಾರಿ, ಮಲ್ಲಿಕಾರ್ಜುನ ಸಾತಖೇಡ, ಆನಂದ ಇಂಗಳಗಿ, ಗುಂಡುಗೌಡ ಚಾಮನೂರ, ದೇವೇಂದ್ರ ಬಡಿಗೇರ, ಗೋಪಾಲರಾವ ಸುತ್ರಾವೆ, ಚಂದ್ರಶೇಖರ ಬೆಣ್ಣೂರ, ಯಂಕಮ್ಮ ಗೌಡಗಾಂವ, ನಿರ್ಮಲಾ ಇಂಡಿ, ಮೋನಪ್ಪ ಪಂಚಾಳ, ಶ್ರೀಧರ ಪಂಚಾಳ ಸೇರಿದಂತೆ ಅನೇಕರು ಇದ್ದರು.