ಶಿಕ್ಷಕರ ಕುಟುಂಬದ ಸದಸ್ಯರಿಗೆ ವಿವಿಧ ಚಿಕಿತ್ಸೆಗಳ ಸೌಲಭ್ಯಕ್ಕಾಗಿ
ಆರೋಗ್ಯ ಸಂಜೀವಿನಿ ಯೋಜನೆಯಡಿ ಇಎಸ್’ಆಯ್ ಆಸ್ಪತ್ರೆ ನೋಂದಣಿ ಮಾಡಿಕೊಳ್ಳಲು ಮನವಿ
ಕಲಬುರಗಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ಇಂದು ಕಲಬುರಗಿ ಜಿಲ್ಲೆಯ ESI ಆಸ್ಸತ್ರೇಯ DEAN ಅವರನ್ನು ಭೇಟಿಯಾಗಿ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ವಿವಿಧ ಚಿಕಿತ್ಸೆಗಳ ಸೌಲಭ್ಯಗಳಿಗಾಗಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಲ್ಲಿ ಕಲಬುರಗಿ ಇ.ಎಸ್.ಆಯ್ ಆಸ್ಪತ್ರೆಯನ್ನು ನೋಂದಣಿ ಮಾಡಿಕೊಳ್ಳಲು ಮನವಿ ಸಲ್ಲಿಸಲಾಯಿತು.
ನಮ್ಮ ಮನವಿಗೆ ಸ್ಪಂದಿಸಿದ ಆಸ್ಸತ್ರೇಯ DEAN ಡಾ.ಧನಾಜಿ ಜಾದವ್ ಅವರು ಕೊಡಲೇ ನೋಂದಣಿ ಮಾಡಿಕೊಳ್ಳಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಅಧ್ಯಕ್ಷರಾದ ಬಸವರಾಜ ಬಳುಂಡಗಿ ಪ್ರಮುಖರಾದ ಚಂದ್ರಕಾಂತ ಏರಿ ಧರ್ಮರಾಜ ಜವಳಿ ಕೃಷ್ಣಚಾರಿ ಸಿದ್ದಲಿಂಗಯ್ಯ ಮಠಪತಿ ಅಣ್ಣಾರಾವ ಹಾಬಾಳಕರ ಇತರರು ಉಪಸ್ಥಿತರಿದ್ದರು.