ದೇಗುಲಗಳ ಧರ್ಮ ಹಾಗೂ ಧರ್ಮದ ದೇಗುಲಗಳು ಕೃತಿ ಲೋಕಾರ್ಪಣೆ ನಾಳೆ‌‌

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ವಾಡಿ
ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಡಾ.ಸೂರ್ಯಕಾಂತ ಸುಜ್ಯಾತ್‌ ಅವರು ಅನುವಾದಿಸಿರುವ ‘ದೇಗುಲಗಳ ಧರ್ಮ ಹಾಗೂ ಧರ್ಮದ ದೇಗುಲಗಳು’ ಪುಸ್ತಕದ ಲೋಕಾರ್ಪಣೆ ಸಮಾರಂಭ ಸೆ.6 ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ಕಾಲೋನಿಯ ಸಿದ್ದಾರ್ಥ ಭವನದಲ್ಲಿ ಜರುಗಲಿದೆ ಎಂದು ಸಂಚಲನ ವೇದಿಕೆ ಪ್ರಧಾನ ಕಾರ್ಯದರ್ಶಿ ರವಿ ಕೋಳಕೂರ ತಿಳಿಸಿದ್ದಾರೆ.

ಹಿರಿಯ ಸಾಹಿತಿ ಡಿ.ಎಂ ನದಾಫ್ ಅವರು ಕೃತಿಯನ್ನು ಲೋಕಾರ್ಪಣೆ -ಗೊಳಿಸಲಿದ್ದಾರೆ. ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಶ್ರಾವಣಕುಮಾರ ಮೋಸಲಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.‌

ಕೃತಿಯ ಅನುವಾದಕರು ಕಲಬುರಗಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಸಂದರ್ಶನ ಪ್ರಾಧ್ಯಾಪಕ ಡಾ.ಸೂರ್ಯಕಾಂತ ಸುಜ್ಯಾತ್, ಸಾಮಾಜಿಕ ಕಾರ್ಯಕರ್ತರಾದ ಸುಮಿತ ಸಿಂಧೆ, ಸ್ಥಳೀಯ ಜನಕಲಾ ಸಮಿತಿ ಅಧ್ಯಕ್ಷೆ ಶೋಭಾ ನಿಂಬರ್ಗಾ, ರಮಾಬಾಯಿ ಅಂಬೇಡ್ಕರ್ ಸಂಘದ ಖಜಾಂಚಿ ಸವಿತಾ ಧನ್ನೇಕರ ಭಾಗವಹಿಸಲಿದ್ದಾರೆ ಎಂದು ಸಂಚಲನ ವೇದಿಕೆಯ ಪ್ರಧಾನ ಕಾರ್ಯದರ್ಶಿ ರವಿ ಕೋಳಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *