ಸುದ್ದಿ ಸಂಗ್ರಹ ಕಲಬುರಗಿ
ಎಂಒಬಿ ಶೀಟ್ ಇರುವ ರೂಢಿಗತ ಕಳ್ಳನಿಂದ 20 ಸಾವಿರ ಲಂಚ ಪಡೆಯುವಾಗ ಇಬ್ಬರು ಪೊಲೀಸ್ ಕಾನ್ಸ್ಟೆಬಲ್ಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನಗರದ ಬ್ರಹ್ಮಪುರ ಪೊಲೀಸ್ ಠಾಣೆಯ ಹಿಂಬದಿಯಲ್ಲೆ ಕಾನ್ಸ್ಟೆಬಲ್ಗಳು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಕಾನ್ಸ್ಟೆಬಲ್ ಪರಶುರಾಮ್ ಸಿಕ್ಕಿ ಬಿದ್ದಿದ್ದು, ಮತ್ತೊಬ್ಬ ಕಾನ್ಸ್ಟೆಬಲ್ ವೀರೇಶ ಪರಾರಿಯಾಗಿದ್ದಾರೆ.
ಇಲ್ಲಿನ ಬಾಪುನಗರದ ಮಾಂಗರವಾಡಿ ಗಲ್ಲಿಯ ಕಾರ್ತಿಕ್ ಪಾಟೀಲ ರೂಢಿಗತ ಕಳ್ಳನಾಗಿದ್ದು, ಆತನ ವಿರುದ್ಧ ಎಂಒಬಿ ಶೀಟ್ ಚಾಲ್ತಿಯಲ್ಲಿದೆ.
1 ಲಕ್ಷ ಕೊಡಬೇಕು. ಇಲ್ಲದಿದ್ದರೆ ಗಡಿಪಾರು ಮಾಡಲಾಗುವುದು ಎಂದು ಕಾರ್ತಿಕ್ ಕುಟುಂಬಕ್ಕೆ ಅಪರಾಧ ವಿಭಾಗದ ಈ ಕಾನ್ಸ್ಟೆಬಲ್ಗಳು ಹೆದರಿಸಿದ್ದರು. ಅದರಲ್ಲಿ ಮುಂಗಡವಾಗಿ 50 ಸಾವಿರ ಪಡೆದಿದ್ದರು. ಬಳಿಕ ಮತ್ತೆ 20 ಸಾವಿರ ರೂ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಲೋಕಾಯುಕ್ತ ಮೂಲಗಳು ಹೇಳಿವೆ.
ಕಾನ್ಸ್ಟೆಬಲ್ಗಳು ಲಂಚಕ್ಕೆ ಬೇಡಿಕೆ ಇಟ್ಟ ಕುರಿತು ಕಾರ್ತಿಕ್ ಅವರ ತಂದೆ ಕನ್ನ ರಾಜು ಪಾಟೀಲ ಲೋಕಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಲೋಕಾಯುಕ್ತ ಎಸ್ಪಿ ಸಿ ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಸವರಾಜ ಎಲಿಗಾರ ನೇತೃತ್ವದ ತಂಡವು ದಾಳಿ ನಡೆಸಿತ್ತು.