ಸುದ್ದಿ ಸಂಗ್ರಹ ಶಹಾಬಾದ್
ನಗರದ ವಿವಿಧ ಆಂಜನೇಯ ದೇವಸ್ಥಾನಗಳಲ್ಲಿ ಶ್ರದ್ಧಾ ಭಕ್ತಿಯಿಂದ ಹನುಮ ಜಯಂತಿ ಆಚರಿಸಲಾಯಿತು.
ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೆ ಹನುಮಾನ್ ದೇವರ ಮೂರ್ತಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ವಿವಿಧ ಪೂಜೆ ಭಕ್ತರಿಂದ ನಡೆಯಿತು.
ಆಂಜನೇಯನ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಕುಟುಂಬ ಸಮೇತರಾಗಿ ದೇವಾಲಯಗಳಿಗೆ ಬಂದು ಸ್ವಾಮಿಯ ದರ್ಶನ ಪಡೆದರು. ಹಲವು ದೇವಸ್ಥಾನಗಳಲ್ಲಿ ಭಕ್ತರಿಗೆ ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ದೇವಸ್ಥಾನದ ಅರ್ಚಕರಾದ ರವೀಂದ್ರ ಜೋಶಿ, ಯುವಕರಾದ ವೀರಭದ್ರಯ್ಯ ಸ್ವಾಮಿ, ವೆಂಕಟೇಶ ಕೆ, ಮಹೇಶ, ವಿಶ್ವರಾಧ್ಯ ಗೌಡ, ಸತೀಶ, ಕಲ್ಯಾಣ ದಂಡಾವತಿ, ಚನ್ನವೀರ, ಪ್ರಶಾಂತ, ಬಾಬು, ರಾಘವೇಂದ್ರ, ಕಾನು, ಅನೀಲ, ಮಹಾತೇಂಶ, ಶ್ರೀಕಾಂತ ಗಿರಣಿ ಸೇರಿದಂತೆ ಅನೇಕರು ಪಾಲ್ಗೊಂಡಿದರು.