ಸುದ್ದಿ ಸಂಗ್ರಹ ಬೆಂಗಳೂರು
ನಗರದಲ್ಲಿ ಟ್ರಾಫಿಕ್ ಪೊಲೀಸ್ ಮೇಲೆ ಜೆಡಿಎಸ್ ನಾಯಕ ಗೊಟ್ಟಿಗೆರೆ ಮಂಜ ದರ್ಪ ತೋರಿರುವ ಘಟನೆ ನಡೆದಿದೆ.
ನನ್ನ ಗಾಡಿಯನ್ನೆ ಸ್ಟಾಪ್ ಮಾಡ್ತಿಯಾ ಅಂತ ಟ್ರಾಫಿಕ್ ಪೊಲೀಸ್ ಮೇಲೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜ ಹಲ್ಲೆಗೆ ಯತ್ನಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಸಿಬ್ಬಂದಿಯ ಕೊರಳ ಪಟ್ಟಿ ಹಿಡಿದು ಜಗಳ ಮಾಡುತ್ತಿರುವ ದೃಶ್ಯ ವೀಡಿಯೋದಲ್ಲಿ ಹರಿದಾಡಿದೆ.
ಗೊಟ್ಟಿಗೆರೆ ಬಳಿ ಟ್ರಾಫಿಕ್ ಸಿಬ್ಬಂದಿ ನಿಂತಿದ್ದರು. ಆ ಸಂದರ್ಭದಲ್ಲಿ ಕೊಟ್ಟಿಗೆರೆ ಮಂಜ ಎಂಬವರ ವಾಹನವನ್ನು ಪೊಲೀಸ್ ಸಿಬ್ಬಂದಿ ಸ್ಟಾಪ್ ಮಾಡಿದ್ದಾರೆ. ‘ನನ್ನ ಗಾಡಿಯನ್ನು ಸ್ಟಾಪ್ ಮಾಡ್ತೀಯಾ’ ಎಂದು ಸಿಬ್ಬಂದಿ ಮೇಲೆ ಜೆಡಿಎಸ್ ನಾಯಕ ಹಲ್ಲೆಗೆ ಮುಂದಾಗಿದ್ದರೆಂಬ ಆರೋಪ ಕೇಳಿಬಂದಿದೆ.
ಟ್ರಾಫಿಕ್ ಸಿಬ್ಬಂದಿಯ ಕೊರಳ ಪಟ್ಟಿ ಹಿಡಿದು ಹಲ್ಲೆಗೆ ಯತ್ನಿಸಿದ್ದಾರೆ. ಅದೆ ವೇಳೆ ಸಾರ್ವಜನಿಕರೆಲ್ಲರೂ ಸೇರಿ ಜಗಳ ಬಿಡಿಸಿದ್ದಾರೆ ಎನ್ನಲಾಗಿದೆ.