ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ನಿಂದನೆ: ಬಿಜೆಪಿ ಮುಖಂಡ ಮಣಿಕಂಠ ವಿರುದ್ಧ ಎಫ್ಐಆರ್

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಚಿತ್ತಾಪುರ
ತಾಲೂಕಿನ ದಂಡೋತಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಹಾರದಲ್ಲಿ ಏರುಪೇರಾಗಿ ಮಕ್ಕಳ ಅನಾರೋಗ್ಯದ ಕುರಿತು ಕ್ಷೇತ್ರದ ಶಾಸಕರೂ ಆಗಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಆರೋಪ ಮಾಡುವಾಗ ಅವಾಚ್ಯ ಶಬ್ದಗಳ ಬಳಕೆ ಮಾಡಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈಚೆಗೆ ಎಫ್ಐಆರ್ ದಾಖಲಾಗಿದೆ.

ಶಾಲೆಯಲ್ಲಿ ಊಟದ ನಂತರ 50–60 ಹುಡುಗರು ಫುಡ್‌ ಪಾಯಿಸನಿಂಗ್‌ನಿಂದ ಅಸ್ವಸ್ಥ ಆಗಿದ್ದರು. ಇದನ್ನು ಪ್ರಸ್ತಾಪಿಸಿ ಮಣಿಕಂಠ ಕೆಲ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎಂದು ಮಾದಿಗ ಸಮಾಜದ ಮುಖಂಡ ಮಲ್ಲಿಕಾರ್ಜುನ ಸಾಯಿಬಣ್ಣಾ ಅವರು ಜು.10ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವೈಯಕ್ತಿಕ ದ್ವೇಷದಿಂದ ಸಾರ್ವಜನಿಕವಾಗಿ ಸಚಿವರಿಗೆ ಬೈದು, 50ರಿಂದ 60 ಹುಡುಗರು ಮೃತಪಟ್ಟಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿರುವ ಆರೋಪದಡಿ ಬಿಎನ್ಎಸ್ ಕಲಂ 352, 353(1) (ಬಿ) ಅಡಿಯಲ್ಲಿ ಪಿಎಸ್ಐ ಮಂಜುನಾಥ ರೆಡ್ಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *