ಕೊರೋನಾ ಬಳಿಕ ಎಬೋಲಾ ಆತಂಕ: ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

ನಗರದ

ಸುದ್ದಿ ಸಂಗ್ರಹ ಬೆಂಗಳೂರು
ವಿಶ್ವದಾದ್ಯಂತ ಕೊರೋನಾ ಬಳಿಕ ಇದೀಗ ಎಬೋಲಾ ಆತಂಕ ಎದುರಾಗಿದ್ದು, ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.

ಎಬೋಲಾ ಆತಂಕದ ಹಿನ್ನೆಲೆ ವಿಶ್ವಸಂಸ್ಥೆ ತುರ್ತು ಆರೋಗ್ಯ ಪರಿಸ್ಥಿತಿ ಘೋಷಣೆ ಮಾಡಿದೆ. ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಎಚ್ಚರಿಕೆ ಸಂದೇಶ ರವಾನಿದೆ. ಈ ನಿಟ್ಟಿನಲ್ಲಿ ಕೇಂದ್ರದ ಸೂಚನೆ ಮೇರೆಗೆ ರಾಜ್ಯ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಬಿಡುಗಡೆ ಮಾಡಿದೆ.

ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಎಬೋಲಾ ಭಾದಿತ ದೇಶಗಳಿಂದ ಬರುವ ಜನರ ಮೇಲೆ ನಿಗಾ ವಹಿಸಲು ಮುಂದಾಗಿದೆ. ದೇಶದಲ್ಲಿ ಯಾವುದೆ ಕೇಸ್ ದಾಖಲಾಗಿಲ್ಲ. ಯಾವುದೆ ಆತಂಕ ಬೇಡ. ಕೇಸ್ ಬಂದರೆ ನಿಯಂತ್ರಣ ಮಾಡುತ್ತೆವೆ. ಜನರ ಭಯ ಪಡೋದು ಬೇಡ ಎಂದಿದ್ದಾರೆ.

ಇನ್ನೂ ಎಬೋಲಾ ನಿಯಂತ್ರಣಕ್ಕೆ ಮಾರ್ಗಸೂಚಿ ಜೊತೆಗೆ ಪಾಸಿಟಿವ್ ಆದ ವ್ಯಕ್ತಿಗಳಿಗೆ ಟ್ರೀಟ್‌ಮೆಂಟ್ ನೀಡೋದಕ್ಕೆ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆ ಮತ್ತು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗಳನ್ನು ಗುರುತು ಮಾಡಲಾಗಿದೆ. ವೈದ್ಯರು ಸುರಕ್ಷತಾ ಕ್ರಮಗಳು ತೆಗೆದುಕೊಳ್ಳುವದಕ್ಕೆ ತಿಳಿಸಲಾಗಿದೆ.

ಎಬೋಲಾ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮ
1. ಐಡಿಎಸ್‌ಪಿ ಅಡಿಯಲ್ಲಿ ತೀವ್ರ ನಿಗಾ ವ್ಯವಸ್ಥೆ ಮತ್ತು ಅನುಮಾನಾಸ್ಪದ ಪ್ರಕರಣಗಳ ಮೇಲ್ವಿಚಾರಣೆ
2. ವಿಮಾನ ನಿಲ್ದಾಣಗಳು ಮತ್ತು ಪ್ರವೇಶ ಕೇಂದ್ರದೊಂದಿಗೆ ನಿಗಾ
3. ಪ್ರತ್ಯೇಕ ಕ್ವಾರಂಟೈನ್ ಮತ್ತು ಐಸೋಲೇಷನ್ ಸೌಲಭ್ಯ, ರೆಫರಲ್ ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕು
4. ಆರೋಗ್ಯ ಸಿಬ್ಬಂದಿಗೆ ತರಬೇತಿ ಮತ್ತು ಸೋಂಕು ನಿಯಂತ್ರಣ ಕ್ರಮಗಳ ಬಲಪಡಿಸಬೇಕು
5. ಅಗತ್ಯ ಪಿಪಿಇ ಕಿಟ್ ಮತ್ತು ಔಷಧಿ ಸಂಗ್ರಹಕ್ಕೆ ಸಿದ್ಧತೆ
6. ತ್ವರಿತಾ ಪ್ರಕ್ರಿಯಾ ತಂಡಗಳನ್ನ ಸಜ್ಜುಗೊಳಿಸಬೇಕು

ಎಬೋಲಾ ರೋಗ ಹೇಗೆ ಹರಡುತ್ತದೆ ?
ಸೋಂಕಿತ ವ್ಯಕ್ತಿಗಳ ರಕ್ತ, ಅಂಗಗಳು, ದೇಹ ದ್ರವದೊಂದಿಗೆ ಸಂಪರ್ಕ
ಹಾಸಿಗೆ, ಬಟ್ಟೆ, ಸಿರಿಂಜ್‌ನಂತಹ ಕಲುಷಿತ ವಸ್ತುಗಳ ಸಂಪರ್ಕದಿಂದ ಹರಡುತ್ತದೆ.

Leave a Reply

Your email address will not be published. Required fields are marked *