ಸುದ್ದಿ ಸಂಗ್ರಹ

ರಾವೂರ ಸಿದ್ದಲಿಂಗ ಶ್ರೀಗಳ ಜನ್ಮದಿನದಂದು ಉಚಿತ ಕ್ಷೌರ ಸೇವೆ.

ಸುದ್ದಿ ಸಂಗ್ರಹ ಚಿತ್ತಾಪುರ

ರಾವೂರ ಗ್ರಾಮದ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಸಿದ್ದಲಿಂಗ ಮಹಾಸ್ವಾಮಿಗಳ 34ನೇ ಜನ್ಮದಿನವನ್ನು ಉಚಿತ ಕ್ಷೌರ ಸೇವೆಯ ಮೂಲಕ ಆಚರಣೆ ಮಾಡಲಾಯಿತು.

ರಾವೂರ ಗ್ರಾಮದ ಗುರು ಮೆನ್ಸ್ ಪಾರ್ಲರ್ ವತಿಯಿಂದ ನಿರಂತರ 3ನೇ ವರ್ಷದಿಂದ ಉಚಿತ ಕ್ಷೌರ ಸೇವೆ ಮಾಡುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ, ಹುಟ್ಟು ಹಬ್ಬ ಸಮಾಜಮುಖಿಯಾಗಿ ಆಚರಣೆ ಮಾಡಿದಾಗ ಮಾತ್ರ ಜನ್ಮ ಸಾರ್ಥಕವಾಗುತ್ತದೆ. ಬಡವರಿಗೆ, ವಿಕಲಚೇತನರಿಗೆ, ದುರ್ಬಲರಿಗೆ ಸಹಾಯ ಮಾಡುವ ಮೂಲಕ ಮಾದರಿಯಾಗಬೇಕು, ಇಂತಹ ಕಾರ್ಯ ಶ್ರೀಗುರು ಮೆನ್ಸ್ ಪಾರ್ಲರ್ ಉಚಿತ ಕ್ಷೌರ ಸೇವೆ ಮಾಡುವ ಮೂಲಕ ಮಾದರಿ ಕೆಲಸ ಮಾಡುತ್ತಿದೆ ಎಂದರು.

ಶಿಕ್ಷಕ ಸಿದ್ದಲಿಂಗ ಬಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

150ಕ್ಕೂ ಹೆಚ್ಚಿನ ಜನರಿಗೆ ಕ್ಷೌರ ಸೇವೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಹಾದೇವ ವಡಗೇರಿ, ಗಂಗೂ ವಡಗೇರಿ, ಭಾಗಣ್ಣ ವಡಗೇರಿ, ಅಂಬರೀಷ್, ಶರಣಪ್ಪ, ಮಹೇಶ ಬಾಳಿ, ಶಾಂತು ಬಾಳಿ, ಭೀಮರಾವ ಪಾಟೀಲ್, ಈರಣ್ಣ ಕಲ್ಯಾಣಿ, ಶಿವಾನಂದ ಕೋರಿ, ಸಿದ್ದು ಪೂಜಾರಿ, ಬಸವರಾಜ ಪೂಜಾರಿ, ಗುರು ಗುತ್ತೇದಾರ, ಅಂಬರೀಶ್ ಸಾಂಗ್ಲಿಯಾನ, ಅಶೋಕ್ ಗೋಳಾ, ನಾಗು ಮಾಲಗತ್ತಿ, ರೇವಣಸಿದ್ಧ ವಲoಡಿ, ಸಿದ್ದು ಮದಗುಣಕಿ, ಈರಣ್ಣ ಪೂಜಾರಿ ಸೇರಿದಂತೆ ಅನೇಕರು ಇದ್ದರು

Leave a Reply

Your email address will not be published. Required fields are marked *