ಡಿಜಿಟಲ್ ತಂತ್ರಜ್ಞಾನದಿಂದ ಯುವಕರಿಗೆ ಉದ್ಯೋಗವಕಾಶ: ವಾಸುದೇವ ಚವ್ಹಾಣ‌

ನಗರದ

ಸುದ್ದಿ ಸಂಗ್ರಹ ಶಹಾಬಾದ
ಇಂದಿನ ಆಧುನಿಕ ಯುಗವು ಡಿಜಿಟಲ್ ತಂತ್ರಜ್ಞಾನಗಳ ಯುಗವಾಗಿದ್ದು, ಡಿಜಿಟಲ್ ತಂತ್ರಜ್ಞಾನ ಕೇವಲ ಕಲಿಕೆಗೆ ಸೀಮಿತವಾಗದೆ, ಅಪಾರ ಉದ್ಯೋಗಾವಕಾಶಗಳ
ಗಣಿಯಾಗಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ವಾಸುದೇವ ಚವ್ಹಾಣ ಹೇಳಿದರು.

ಮಂಗಳವಾರ ನಗರದ ಹೈ-ಕ ಶಿಕ್ಷಣ ಸಂಸ್ಥೆಯ ಎಸ್‌.ಎಸ್ ಮರಗೋಳ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ‘ಯುವಕರಿಗೆ ಡಿಜಿಟಲ್ ಉದ್ಯೋಗ ಅವಕಾಶಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ವಿದ್ಯಾರ್ಥಿಗಳು ಕೇವಲ ಪದವಿ ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ, ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ತಾಂತ್ರಿಕ ಕೌಶಲ್ಯಗಳನ್ನು ಬಳಸಿಕೊಂಡು ಸ್ವಯಂ ಉದ್ಯೋಗಿಗಳಿಗೆ ಹೆಚ್ಚಿನ ಅವಕಾಶವಿದೆ ಎಂದರು.

ಪತ್ರಕರ್ತ ದಾಮೋದರ ಭಟ್ಟ ಮಾತನಾಡಿ, ಮಾಹಿತಿ ತಂತ್ರಜ್ಞಾನದ ಈ ಕಾಲದಲ್ಲಿ ಪ್ರತಿಯೊಂದು ಕ್ಷೇತ್ರವು ಡಿಜಿಟಲೀಕರಣಗೊಳ್ಳುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಡಿಜಿಟಲ್ ಸಾಕ್ಷರತೆ ಹೊಂದುವುದು ಅನಿವಾರ್ಯವಾಗಿದೆ. ಕಾಲೇಜು ಹಂತದಲ್ಲಿಯೇ ಇಂತಹ ಕಾರ್ಯಾಗಾರಗಳ ಮೂಲಕ ವಿದ್ಯಾರ್ಥಿಗಳು ಭವಿಷ್ಯದ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದರು.

ಹಿರಿಯ ಉಪನ್ಯಾಸಕಿ ಗೌರಾದೇವಿ ಶೇರಿ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಪ್ರಾಚಾರ್ಯ ಡಾ.ಬಸವರಾಜ ಹಿರೇಮಠ, ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ.ಲಕ್ಷ್ಮಣ ಟಿ, ಡಾ.ಕಾವೇರಿ ಎಚ್, ಗ್ರಂಥಪಾಲಕಿ ಲಲಿತಾ, ಉಪನ್ಯಾಸಕಿ ಪ್ರತಿಭಾ ವೇದಿಕೆಯ ಮೇಲಿದ್ದರು.

ವಿದ್ಯಾರ್ಥಿ ಶಿವಕುಮಾರ ಸೇರಿದಂತೆ ಇನ್ನಿತರ ಅನೇಕ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಉಪನ್ಯಾಸಕರಾದ ಶಿವಶಂಕರ ಹಿರೇಮಠ, ರಾಮಣ್ಣ ಇಬ್ರಾಹಿಂಪೂರ, ಶಿವಕುಮಾರ ಕುಸಾಳೆ, ಕೆ.ಟಿ ಚವ್ಹಾಣ, ಸರಿತಾ ಶ್ರೀಪತಿ ಸೇರಿದಂತೆ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

Leave a Reply

Your email address will not be published. Required fields are marked *