
ಸುದ್ದಿ ಸಂಗ್ರಹ ವಾಡಿ
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮಿಗಳ 119ನೇ ಜಯಂತಿ ಆಚರಿಸಲಾಯಿತು.
ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ತುಮಕೂರಿನ ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮಿಜಿಯವರು ನಡೆದಾಡುವ ದೇವರು ಎಂದೆ ಪ್ರಸಿದ್ಧರಾದ ಶ್ರೇಷ್ಠ ಆಧ್ಯಾತ್ಮಿಕ ಶರಣರಾಗಿದ್ದರು ಎಂದರು.
ಶಿಕ್ಷಣ ತಜ್ಞ ಮತ್ತು ದಾಸೋಹಿಗಳಾದ ಸ್ವಾಮಿಗಳು 111 ವರ್ಷಗಳ ಕಾಲ ಬದುಕಿ, ತ್ರಿವಿಧ ದಾಸೋಹಗಳಾದ ಅನ್ನ, ಅಕ್ಷರ, ಜ್ಞಾನದ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದರು. ಸರಳ ಜೀವನ ಮತ್ತು ಉನ್ನತ ಚಿಂತನೆಯ ತತ್ವ ಅನುಸರಿಸಿ, ಇತರರನ್ನು ಅದೆ ಮಾರ್ಗವನ್ನು ಅನುಸರಿಸಲು ಪ್ರೇರೇಪಿಸಿದ ಶಿವಕುಮಾರ ಮಹಾಸ್ವಾಮಿಜಿ ಅವರ ಸೇವೆಯನ್ನು ಮೆಚ್ಚಿ ಹಲವಾರು ರಾಷ್ಟ್ರ ಹಾಗೂ ಅಂತರರಾಷ್ಟ್ರ ಮಟ್ಟದ ಪ್ರಶಸ್ತಿಗಳು ದೊರೆತಿದೆಯಲ್ಲದೆ, ಭಾರತ ಸರ್ಕಾರವು ಅವರಿಗೆ 2015ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ, ನಮ್ಮ ಧರ್ಮದ ಏಕತೆ, ಸಮಗ್ರತೆ ಮತ್ತು ಸನಾತನ ಧರ್ಮದ ಪರಂಪರೆಯನ್ನು ಶ್ರೀಮಂತಗೊಳಿಸಲು ಸ್ವಾಮಿಜಿ ತಮ್ಮದೆಯಾದ ಕೊಡುಗೆ ನೀಡಿ, ಶರಣ ಕುಲಕ್ಕೆ ಮಾದರಿಯಾಗಿದ್ದಾರೆ ಎಂದರು.
ಈ ಸಂಧರ್ಭದಲ್ಲಿ ಯವ ಮುಖಂಡ ವಿಠಲ ನಾಯಕ, ಎಸ್.ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ, ಮುಖಂಡರಾದ ಪ್ರೇಮ ರಾಠೋಡ, ಹೀರಾ ನಾಯಕ, ಮಲ್ಲಿಕಾರ್ಜುನ ಸಾತಖೇಡ, ಕಾಶಿನಾಥ ಶೆಟಗಾರ, ರಂಗಪ್ಪ ದೊರೆ, ಸುರೇಶ ಕದಮ, ಮಾರುತಿ ಮಾವುರಕರ, ಸುಶೀಲ ಭಗಾಡೆ ಸೇರಿದಂತೆ ಅನೇಕರು ಇದ್ದರು.