ವಾಡಿಯಲ್ಲಿ ಮನ್ ಕೀ ಬಾತ್ ವೀಕ್ಷಣೆ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ವಾಡಿ
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್‌’ನ 132ನೇ ಸಂಚಿಕೆಯನ್ನು ಮುಖಂಡರು ವೀಕ್ಷಿಸಿದರು.

ಪ್ರಧಾನಮಂತ್ರಿಯವರು ಪ್ರಸ್ತುತ ನಡೆಯುತ್ತಿರುವ ಇಸ್ರೇಲ್-ಇರಾನ್-ಅಮೇರಿಕಗಳ ಯುದ್ಧ ಮತ್ತು ಅದರ ಪರಿಣಾಮವಾಗಿ ಉಂಟಾಗಬಹುದಾದ ತೈಲ ಮತ್ತು ಅನಿಲ ಬಿಕ್ಕಟ್ಟಿನ ಬಗ್ಗೆ ಮಾತನಾಡಿದರು.

ಕರೋನಾದಂತಹ ಕಠಿಣ ಪರಿಸ್ಥಿತಿಯನ್ನು ನಾವು ಹೇಗೆ ಎದುರಿಸಿದೆವೋ, ಹಾಗೆಯೇ ಪ್ರಸ್ತುತ ಜಾಗತಿಕ ಸವಾಲುಗಳಿಂದಲೂ ನಾವು ಹೊರಬರಲಿದ್ದೆವೆ ಎಂಬ ಭರವಸೆಯ ಮಾತುಗಳನ್ನು ಆಲಿಸಿ, ಅವರು ದೇಶಕ್ಕಾಗಿ ತೆಗೆದುಕೊಳ್ಳುತ್ತಿರುವ ದಿಟ್ಟ ನಿರ್ಧಾರಗಳನ್ನು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮುಖಂಡರೊಂದಿಗೆ
ಚರ್ಚಿಸಿದರು.

ಈ ಸಂಧರ್ಭದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ, ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಭೀಮರಾವ ದೊರೆ, ರವೀಂದ್ರ ನಾಯಕ, ಕಿಶನ್ ಜಾಧವ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *