ಲಿಂ.ಗೌರಮ್ಮ ತಾಯಿಯವರ ಪುಣ್ಯಸ್ಮರಣೋತ್ಸವ: ಉಚಿತ ನೇತ್ರ ತಪಾಸಣೆ, ಮಾತೋಶ್ರೀ ಪ್ರಶಸ್ತಿ ಪ್ರದಾನ

ತಾಲೂಕು

ಸುದ್ದಿ ಸಂಗ್ರಹ ಚಿತ್ತಾಪುರ
ನಾಲವಾರದ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಅನ್ನಪೂರ್ಣೇಶ್ವರಿಯಂದೆ ಗೌರವಿಸಲ್ಪಡುತ್ತಿದ್ದ, ಪ್ರಸ್ತುತ ಪೀಠಾಧಿಪತಿ ಪರಮಪೂಜ್ಯ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮದಾತೆ ಲಿಂ.ಗೌರಮ್ಮ ತಾಯಿಯವರ ಪುಣ್ಯಸ್ಮರಣೋತ್ಸವ ಹಾಗೂ ಮಾತೋಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಮಾ.26ರಂದು ಗುರುವಾರ ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ತಿಳಿಸಿದ್ದಾರೆ.

ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಪಾವನ ಸಾನಿಧ್ಯದಲ್ಲಿ ನಡೆಯುವ ಈ ಸಮಾರಂಭದಲ್ಲಿ ಮಾಜಿ ಮಂತ್ರಿಗಳು, ಶರಣತತ್ವ ಪ್ರಸಾರಕ್ಕಾಗಿ ಶ್ರಮಿಸುತ್ತಿರುವ ಹಿರಿಯ ಮುತ್ಸದ್ಧಿ ಲೀಲಾದೇವಿ ಆರ್ ಪ್ರಸಾದ್ ಅವರಿಗೆ ಪ್ರಸಕ್ತ ಸಾಲಿನ ಮಾತೋಶ್ರೀ ಪ್ರಶಸ್ತಿ ಪ್ರದಾನ ನೆರವೇರಲಿದೆ. ನಾಡಿನ ಹರ-ಗುರು-ಚರಮೂರ್ತಿಗಳು, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದ ಗಣ್ಯರು ಭಾಗವಹಿಸುವ ಸಮಾರಂಭದಲ್ಲಿ ಮಹಿಳೆಯರ ಕುರಿತಾದ ಚಿಂತನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಶ್ರೀಮಠದ ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮದಾತೆಯಾಗಿರುವ ಲಿಂ.ಗೌರಮ್ಮ ತಾಯಿಯವರು ಶ್ರೀಮಠದ ಲಕ್ಷಾಂತರ ಭಕ್ತರಿಗೆ ಮಮತೆಯಿಂದ ಕಂಡು ಅವರಿಗೆ ಮಾತೃವಾತ್ಸಲ್ಯದ ಪ್ರೀತಿಯನ್ನು ನೀಡಿದವರು. ಶ್ರೀಮಠದ ದಾಸೋಹ ವ್ಯವಸ್ಥೆಯ ಜವಾಬ್ದಾರಿ ಹೊತ್ತು, ಅತ್ಯಂತ ಸಮರ್ಪಣಾ ಭಾವದಿಂದ ದಣಿವರಿಯದೆ ದುಡಿದ ಮಹಾಚೇತನವಾಗಿ, ಶ್ರೀಮಠದ ಭಕ್ತರಿಂದ ಅನ್ನಪೂರ್ಣೇಶ್ವರಿ ಎಂದೆ ಗೌರವಿಸಲ್ಪಡುತ್ತಿದ್ದರು ಎಂದು ತಿಳಿಸಿದ್ದಾರೆ.

ಲಿಂ.ಗೌರಮ್ಮ ತಾಯಿಯವರ ಸ್ಮರಣಾರ್ಥವಾಗಿ ನೀಡಲ್ಪಡುವ ಮಾತೋಶ್ರೀ ಪ್ರಶಸ್ತಿಗೆ ಈಗಾಗಲೇ ಹಿರಿಯ ಜಾನಪದ ಕಲಾವಿದೆ ಪದ್ಮಶ್ರೀ ಮಂಜಮ್ಮ ಜೋಗತಿ, ವಿಲಾಸವತಿ ಖೂಬಾ, ಶರಣಬಸವೇಶ್ವರರ ಸಂಸ್ಥಾನದ ಪೂಜ್ಯ ಡಾ.ದಾಕ್ಷಾಯಣಿ ಶರಣಬಸವಪ್ಪ ಅಪ್ಪಾ ಅವರಿಗೆ ಪ್ರದಾನ ಮಾಡಲಾಗಿದ್ದು, ಪ್ರಸಕ್ತ ಸಾಲಿಗೆ ಲೀಲಾದೇವಿ ಆರ್ ಪ್ರಸಾದ್ ಅವರಿಗೆ ಪ್ರದಾನ ಮಾಡಲಾಗುವುದು, ಆ ದಿನ ಬೆಳಗ್ಗೆ 10 ಗಂಟೆಗೆ ಶ್ರೀಮಠದ ಆವರಣದಲ್ಲಿ ಕಲಬುರಗಿಯ ಪ್ರತಿಷ್ಠಿತ ಕಣ್ಣಿನ ಆಸ್ಪತ್ರೆ ಭಾರುಕಾ ಖ್ಯಾತ ವೈದ್ಯ ಡಾ.ಪ್ರಭುದೇವ್ ಲಿಂಗದಳ್ಳಿ ಮತ್ತು ಕುಸುಮ ಇಂಟರ್ ಗ್ರೇಟ್ ಡೆವಲಪ್ಮೆಂಟ್ ಸೊಸೈಟಿ ಕಲಬುರಗಿ ಇವರ ವತಿಯಿಂದ ಉಚಿತ ನೇತ್ರ ತಪಾಸಣೆ ಮತ್ತು ಕಣ್ಣಿನ ಪೊರೆ ತೆಗೆಯುವುದು ಹಾಗೂ ಶಸ್ತ್ರ ಶಿಕ್ಷೆ ಆಯೋಜಿಸಲಾಗಿದೆ, ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ತಿಳಿಸಿದ್ದಾರೆ.

Leave a Reply

Your email address will not be published. Required fields are marked *