ಚಿತ್ತಾಪುರ: ಇಂದ್ರಿಯಗಳ ಸಂಯಮ, ಭಾವಶುದ್ಧಿ ಚಿಂತನೆ, ಕೃತಜ್ಞತಾ ಭಾವ, ದೃಢ ಭಕ್ತಿ, ದಯೆ, ದಾನ, ಆತ್ಮ ಶುದ್ಧತೆ, ಸತ್ಯ, ಸೇವಾಗುಣದಂತಹ ತತ್ವಗಳನ್ನು ಅಳವಡಿಸಿಕೊಂಡು ಎಲ್ಲಾ ಪ್ರಜೆಗಳಿಗೆ ಸಮಾನವಾಗಿ ಕಂಡ ಸಾಮ್ರಾಟ ಅಶೋಕ ಅಪರೂಪದ ಅರಸನಾಗಿದ್ದರು ಎಂದು ಸಮಾಜ ಸೇವಕ, ಚಿಂತಕ ಡಾ.ಸುನೀಲಕುಮಾರ ಎಚ್ ವಂಟಿ ಹೇಳಿದರು.
ತಾಲೂಕಿನ ಸನ್ನತಿ ಗ್ರಾಮದ ಬುದ್ಧ ವಿಹಾರದ ಅಶೋಕ ಶಾಸನದ ಸ್ಥಳಕ್ಕೆ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಜರುಗಿದ ‘ಐತಿಹಾಸಿಕ ಕ್ಷೇತ್ರಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-11’ರಲ್ಲಿ ಮಾತನಾಡಿದ ಅವರು, ಸನ್ನತಿ ಕ್ಷೇತ್ರಕ್ಕೆ ಅಶೋಕ ಅವರು ಭೇಟಿ ನೀಡಿದ ಸ್ಥಳವಾಗಿದೆ. ಇಲ್ಲಿ ಶಾಸನವಿದೆ, ಈ ಸ್ಥಳ ಅಭಿವೃದ್ಧಿಯಾಗಬೇಕು. ಕ್ಷೇತ್ರದ ಬಗ್ಗೆ ಇನ್ನೂ ಹೆಚ್ಚು ಜಾಗೃತಿ ಮೂಡಿಸಬೇಕು. ಪ್ರವಾಸಿಗರ ಸಂಖ್ಯೆ ಹೆಚ್ಚಾಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಇಓ ವಿಜಯಕುಮಾರ ಜಮಖಂಡಿ, ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ, ಉಪಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ, ಸದಸ್ಯರಾದ ಶಿವಯೋಗೆಪ್ಪಾ ಎಸ್. ಬಿರಾದಾರ, ಅಣ್ಣಾರಾಯ ಎಚ್.ಮಂಗಾಣೆ, ಸುಜಯ ಎಸ್. ವಂಟಿ, ಅಭಿಷೇಕ ಶಾರ್ವರಿ ಸೇರಿದಂತೆ ಅನೇಕರು ಇದ್ದರು.