ಸುದ್ದಿ ಸಂಗ್ರಹ ಶಹಾಬಾದ
ಶಂಕರವಾಡಿ ಬ್ರಿಜ್ ಹತ್ತಿರದ ಕಾಗಿಣಾ ನದಿಯಲ್ಲಿ ಸಂಕ್ರಾಂತಿ ಹಬ್ಬದ ದಿನದಂದು ಈಜಲು ಹೋದ 16 ವರ್ಷದ ವೆಂಕಟೇಶ್ ಶರಣಪ್ಪ ಎಂಬ ಬಾಲಕ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.
ಮೃತ ಬಾಲಕ ನಗರದ ಹನುಮಾನ ನಗರ ನಿವಾಸಿಯಾಗಿದ್ದು, ಸ್ನೇಹಿತರ ಜೊತೆ ನದಿಯಲ್ಲಿ ಈಜಾಡಲು ಹೋದಾಗ ಘಟನೆ ನಡೆದಿದೆ.
ಕುಟುಂಬದ ವಾರಸುದಾರ ಮಗನನ್ನು ಕಳೆದುಕೊಂಡ ತಂದೆ ತಾಯಿ ಮತ್ತು ಕುಟುಂಬಸ್ಥರ ಅಕ್ರಂದನ ನೆರೆದಿದ್ದ ಜನರ ಕಣ್ಣಲ್ಲಿ ನೀರು ಬರುವಂತಾಯಿತು.
ಬಾಲಕ ಓದುವುದರಲ್ಲಿ ಚುರುಕಾಗಿದ್ದ, ಕರಾಟೆ, ಸಂಗೀತ ಮತ್ತು ನೃತ್ಯ ಸೇರಿದಂತೆ ಹಲವಾರು ಪ್ರತಿಭೆ ಹೊಂದಿದ್ದನು ಎಂದು ಸ್ಥಳೀಯರು ಹೇಳಿದರು.
ಘಟನೆ ತಿಳಿದ ಕೂಡಲೆ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಸಿ ಸುಮಾರು 2 ಗಂಟೆಗಳ ಕಾಲ ಶೋಧ ನಡೆಸಿ ಬಾಲಕನ ಶವ ಪತ್ತೆ ಹಚ್ಚಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು.
ಮಗನಿಗೆ ಅನ್ಯಾಯವಾಗಿದೆ ನಮಗೆ ನ್ಯಾಯ ಕೊಡಿಸಬೇಕು ಎಂದು ಕುಟುಂಬಸ್ಥರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಸಂದರ್ಭದಲ್ಲಿ ನಗರ ಪೊಲೀಸ್ ಠಾಣೆಯ ಪಿ.ಐ ಪರಶುರಾಮ ವನಂಜಕರ, ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಉಪಸ್ಥಿತರಿದ್ದರು.