ಬಸ್ ಹತ್ತುವಾಗ 1.85 ಲಕ್ಷ ಮೌಲ್ಯದ ಚಿನ್ನಾಭರಣ, ಮೊಬೈಲ್ ಕಳವು

ನಗರದ

ಕಲಬುರಗಿ: ಬಸ್‌ ಹತ್ತುವಾಗ ಮಹಿಳೆಯೊಬ್ಬರ ಬ್ಯಾಗಿನಲ್ಲಿದ್ದ ಸುಮಾರು 1.85 ಲಕ್ಷ ರೂ ಮೌಲ್ಯದ ಚಿನ್ನಾಭರಣ ಮತ್ತು ಮೊಬೈಲ್ ಕಳ್ಳತನವಾಗಿರುವ ಘಟನೆ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.

ಬೀದರ್ ಜಿಲ್ಲೆಯ ಬಸವಕಲ್ಯಾಣದ ನಿವಾಸಿ ಶಿಲ್ಪಾರಾಣಿ ಎಂಬುವವರು ನಗರದಲ್ಲಿ ಸಂಬಂಧಿಕರ ಗೃಹ ಪ್ರವೇಶ ಮುಗಿಸಿ, ಮರಳಿ ಊರಿಗೆ ಹೋಗಲು ಬಸ್ ಹತ್ತುವಾಗ ಈ ಕೃತ್ಯ ನಡೆದಿದೆ. ಕಿಡಿಗೇಡಿಗಳು ಶಿಲ್ಪಾರಾಣಿ ಬ್ಯಾಗಿನಲ್ಲಿದ್ದ ಪರ್ಸ್ ನಿಂದ 45 ಗ್ರಾಂ ತೂಕದ ಚಿನ್ನದ ಆಭರಣ, 15 ಗ್ರಾಂ ನೆಕ್ಲೆಸ್ ಮತ್ತು ಮೊಬೈಲ್ ಕಳವು ಮಾಡಿದ್ದಾರೆ. ಕಳುವಾದ ಒಟ್ಟು 60 ಗ್ರಾ ಚಿನ್ನಾಭರಣದ ಮೌಲ್ಯ ಸುಮಾರು 1.85 ಲಕ್ಷ ರೂ ಎಂದು ಅಂದಾಜಿಸಲಾಗಿದೆ.

ಈ ಕುರಿತು ಸಂತ್ರಸ್ತೆ ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *