ಸುದ್ದಿ ಸಂಗ್ರಹ ಕಲಬುರಗಿ
ಯುವಕರು ಸೈನಿಕರಂತೆ ದೇಶದ ರಕ್ಷಣೆ, ಒಳಿತಿಗಾಗಿ ಸೇವೆ ಸಲ್ಲಿಸುವುದು ಅಗತ್ಯ ಎಂದು ಮಾಜಿ ಯೋಧ ಶಿವಶರಣಪ್ಪ ಎಸ್ ತಾವರಖೇಡ್ ಯುವಕರಿಗೆ ಸಲಹೆ ನೀಡಿದರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದ ಸಕ್ಸಸ್ ಕಂಪ್ಯೂಟರ ತರಬೇತಿ ಸಂಸ್ಥೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘55ನೇ ವಿಜಯ ದಿವಸ್‌ದಲ್ಲಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿ, ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮಗಿಷ್ಟವಾದ ಕೋರ್ಸ ಅಧ್ಯಯನ ಮಾಡಿ ನಂತರ ಕ್ಷೇತ್ರದಲ್ಲಿ ಕೆಲಸ ಮಾಡಿ. ಆದರೆ ದೇಶ ಸೇವೆ, ಭಕ್ತಿ, ರಕ್ಷಣೆ ಎಂಬುದು ಕೇವಲ ಸೈನಿಕರಿಗೆ ಮಾತ್ರ ಸೀಮಿತವಲ್ಲ. ಯುವಕರು ಸೈನಿಕರಂತೆ ದೇಶದ ಒಳಿತಿಗೆ ಸೇವೆ ಸಲ್ಲಿಸಬೇಕು ಎಂದರು.
ಭಾರತವು 1971ರಲ್ಲಿ ಪಾಕಿಸ್ಥಾನದೊಂದಿಗೆ ಯುದ್ಧ ಮಾಡಿ, ಗೆಲವು ಸಾಧಿಸಿದ ದಿನ ಇದಾಗಿದೆ. 13 ದಿನಗಳ ಕಾಲ ಜರುಗಿದ ಯುದ್ಧವು ಐತಿಹಾಸಿಕ ಮೈಲುಗಲ್ಲಾಗಿದೆ. ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ಸೈನಿಕರನ್ನು ಸ್ಮರಿಸಿ, ಗೌರವ ಸಲ್ಲಿಸುವುದು ಈ ದಿನದ ಹಿನ್ನಲೆಯಾಗಿದೆ. ಬಾಂಗ್ಲಾದೇಶವನ್ನು ಪೂರ್ವ ಪಾಕಿಸ್ಥಾನದಿಂದ ವಿವೇಚನೆಗೊಳಿಸಿದ ಸ್ಮರಣಾರ್ಥವಾಗಿ ನಮ್ಮ ದೇಶದಲ್ಲಿ ಡಿ.16ರಂದು ಈ ದಿನ ಆಚರಿಸಲಾಗುತ್ತದೆ. ನಾನು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ, ತಾಯಿ ಭಾರತಾಂಬೆಯ ಸೇವೆ ಮಾಡಿದ್ದೆನೆ. ಆಗ ನನ್ನ ದೇಹದ ಕಣ್ಣಿನ ಬಳಿ ಗುಂಡು ತಗಲಿದರು ಕೂಡಾ ನನಗೆ ನನ್ನ ದೇಹಕ್ಕಿಂತ ದೇಶ ಮುಖ್ಯ ಎಂದು ಸೇವೆ ಮಾಡಿದ್ದೆನೆ ಎಂದು ಸ್ಮರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಎಚ್.ಬಿ ಪಾಟೀಲ್, ಹಿಮಾವೃತ ಪ್ರದೇಶ, ವಿಪರಿತ ಚಳಿ ಕಷ್ಟದ ಪರಿಸ್ಥಿತಿಯಲ್ಲಿಯೂ ಜೀವದ ಹಂಗನ್ನು ತೊರೆದು, ತಮ್ಮ ಕುಟುಂಬದ ಬಗ್ಗೆ ಚಿಂತಿಸದೆ, ಹಗಲು-ರಾತ್ರಿ ದೇಶದ ರಕ್ಷಣೆಗೆ ಕಂಕಣಬದ್ಧವಾಗಿ ಅಮೂಲ್ಯವಾದ ಸೇವೆ ಸಲ್ಲಿಸುವ ಸೈನಿಕರಿಗೆ ದೇಶವೆ ತಮ್ಮ ಪರಿವಾರವೆಂಬ ಭಾವನೆಯಿರುತ್ತದೆ. ಸೈನಿಕರ ಬಗ್ಗೆ ಗೌರವವಿರಲಿ. ಭಾರತೀಯ ಸೈನಿಕರು ವಿಶ್ವದಲ್ಲಿಯೆ ತಮ್ಮದೆಯಾದ ಛಾಪು ಮೂಡಿಸಿದ್ದಾರೆ. ಅವರ ಸೇವೆ ಅನನ್ಯ. ಸೈನಿಕ ವೃತ್ತಿಯ ಬಗ್ಗೆ ನಿರ್ಲಕ್ಷ್ಯ ವಹಿಸಿದೆ, ಯುವಕರು ದೇಶಸೇವೆಗೆ ಸಿದ್ಧರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿಯರಾದ ಪೂಜಾ ಹೂಗಾರ, ಮುಸ್ಕಾನ್ ಶೇಖ್, ಸ್ನೇಹಾ ಚವ್ಹಾಣ ಸೇರಿದಂತೆ ಸಿಬ್ಬಂದಿ, ವಿದ್ಯಾರ್ಥಿಗಳ ಇದ್ದರು.