ಹೊಸದಿಲ್ಲಿ: ಎಲೆಕ್ಟ್ರಿಕ್ ವಾಹನಗಳು ಚಲಿಸುತ್ತಿರುವುದು ಪಾದಚಾರಿಗಳು ಮತ್ತು ಇತರ ವಾಹನ ಚಾಲಕರ ಗಮನಕ್ಕೆ ಬರುವಂತೆ ಮಾಡಲು ಎಲೆಕ್ಟ್ರಿಕ್ ವಾಹನಗಳಿಗೆ ಸ್ಪೀಕರ್ ಅಳವಡಿಕೆಗೆ ಕೇಂದ್ರ ಸರಕಾರ ಮುಂದಾಗಿದೆ. ಇದಕ್ಕಾಗಿ ಕರಡು ನಿಯಮ ಬಿಡುಗಡೆ ಮಾಡಿದ್ದು, 1 ಅಗಸ್ಟ್ 2027 ರಿಂದ ಎಲ್ಲ ವಾಹನಗಳಿಗೆ ಇದನ್ನು ಕಡ್ಡಾಯ ಮಾಡಲಾಗುವುದು ಎಂದು ತಿಳಿಸಿದೆ.
ಎಲೆಕ್ಟ್ರಿಕ್ ವಾಹನಗಳು ಯಾವುದೆ ಶಬ್ದವಿಲ್ಲದೆ ಚಲಿಸುವುದರಿಂದ ಇಂತಹ ವಾಹನಗಳು ಬರುವುದು ಇತರರಿಗೆ ತಿಳಿಯುವುದಿಲ್ಲ. ಹೀಗಾಗಿ ಈ ವಾಹನಗಳಲ್ಲಿ ಸ್ಪೀಕರ್ ಅಳವಡಿಸಿ, ವೇಗ ಕಡಿಮೆ ಇದ್ದಾಗ ಸಾಮಾನ್ಯ ಕಾರುಗಳು ಹೊಮ್ಮಿಸುವ ಎಂಜಿನ್ ಶಬ್ದವನ್ನು ಪ್ರಸಾರ ಮಾಡಲಾಗುತ್ತದೆ. ಇದರಿಂದ ಎಲೆಕ್ಟ್ರಿಕ್ ವಾಹನಗಳು ಚಲಿಸುತ್ತಿರುವುದು ಎಲ್ಲರ ಗಮನಕ್ಕೆ ಬರಲಿದೆ.
2027ರಿಂದ ಕಡ್ಡಾಯ
ಎಲ್ಲ ಮಾದರಿಯ ಎಲೆಕ್ಟ್ರಿಕ್ ವಾಹನಗಳಿಗೆ 1 ಅಗಸ್ಟ್ 2027 ರಿಂದ ಸ್ಪೀಕರ್ ಅಳವಡಿಸುವುದನ್ನು ಕಡ್ಡಾಯ ಮಾಡಲಾಗಿದೆ. ಅದೆ ರೀತಿ 1 ಅಗಸ್ಟ್ 2027ರ ನಂತರ ಉತ್ಪಾದನೆಯಾಗುವ ವಾಹನಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಕೆ ಮಾಡುವುದು ಕಡ್ಡಾಯ ಮಾಡಲಾಗಿದೆ.