Uncategorized


ಸತತ ಮಳೆಯಿಂದ ದೇವಾಲಯಗಳು ಸಂಪೂರ್ಣ ಜಲಾವೃತ, ಜನಜೀವನ ಅಸ್ತವ್ಯಸ್ತ….‌‌..ಸುದ್ದಿ ಸಂಗ್ರಹ ಶಹಾಬಾದ್
ಮಹಾರಾಷ್ಟ್ರ ಜಲಾಶಯಗಳಿಂದ ನಿರಂತರ ನೀರು ಹರಿಬಿಡುತ್ತಿರುವ ಪರಿಣಾಮ ನಗರದ ಹಳೆ ಶಹಬಾದ್, ಸಂಗ್ ಏರಿಯಾ ಅಪ್ಪರ ಮಡ್ಡಿ ಲೋವರ್‌ ಮಡ್ಡಿ, ಸುಮಾರು ನಾಲ್ಕು ವಾರ್ಡಗಳಲ್ಲಿ ಹಳ್ಳದ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ…….ಹಳೆ ಶಹಾಬಾದ್ ವಿಶ್ವರಾಧ್ಯ ಮಠ ಸಂಪೂರ್ಣ ಜಲ
ದಿಗ್ಧಂಧನವಾಗಿದೆ. ಆಕಸ್ಮಿಕವಾಗಿ ಮಠದಲ್ಲಿ ಉಳಿದುಕೊಂಡ ಮಾನಸಿಕ ಅಸ್ತವ್ಯಸ್ತ ಮಹೆಬೂಬ್ ಪಟೇಲ್ ಅವರನ್ನು ರಕ್ಷಿಸಿ ಅಗ್ನಿಶಾಮಕ ದಳದ ತಂಡವು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದಾರೆ…..ವಾರ್ಡ್ ನಂಬರ್ 7, 8, 9, 26 ಮತ್ತು 27ರಲ್ಲಿ ಹೆಚ್ಚು ನೀರು
ನುಗ್ಗಿದ ಪರಿಣಾಮ ಜನ ಸಂಪರ್ಕ ಕುಂಠಿತವಾಗಿದೆ. ಜೆಪಿ
ಕಂಪನಿ ಮಾರ್ಗದ ಮೇಲು ಸೇತುವೆ ಅಥವಾ ರೈಲ್ವೆ
ಸೇತುವೆ ಮಾರ್ಗವನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಜನರು ಅವಲಂಬಿತರಾಗಿರುವುದು ಕಂಡುಬಂದಿತು.

Leave a Reply

Your email address will not be published. Required fields are marked *