ನವದೆಹಲಿ: ಪ್ರತಿವರ್ಷ ಸರ್ಕಾರ ದೇಶದ ಜನತೆಗೆ ಹೊಸ ಹೊಸ ಯೋಜನೆ ನೀಡುತ್ತದೆ. ಹಾಗೆ ಹಳೆಯ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವ ಆದೇಶ ಪ್ರಕಟಿಸುತ್ತಿರುತ್ತದೆ. 2025ರಲ್ಲಿ ಹಲವು ಯೋಜನೆಗಳನ್ನು ಪರಿಚಯಿಸಲಾಗಿದೆ, ಈ ಮೂಲಕ ಸಾಮಾನ್ಯ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಉದ್ದೇಶ ಸರ್ಕಾರ ಹೊಂದಿರುತ್ತದೆ.
ಇದರ ಜೊತೆಗೆ ದೇಶವಾಸಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಗುರಿ ಹೊಂದಿರುತ್ತವೆ. ಉಚಿತ ಪಡಿತರ ವಿತರಣೆ, ವಿದ್ಯುತ್, ಶಿಕ್ಷಣ, ಕೌಶಲ್ಯ ತರಬೇತಿ, ಪಿಂಚಣಿ, ತೆರಿಗೆ ಸೇರಿದಂತೆ ಇನ್ನಿತರ ಸೇವೆಗಳನ್ನು ಒಳಗೊಂಡಿರುತ್ತದೆ. ಮೇ 1ರಿಂದ ದೇಶದ ಜನತೆಗೆ ಉಚಿತವಾಗಿ ಸಿಗಲಿರುವ ಪ್ರಮುಖ 10 ಸೇವೆಗಳ ಮಾಹಿತಿ ಇಲ್ಲಿವೆ.
1.ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಪ್ರತಿ ತಿಂಗಳು ದೇಶದ 80 ಕೋಟಿ ಜನರು ಈ ಯೋಜನೆಯಡಿ 5 ಕೆ.ಜಿ ಗೋಧಿ ಮತ್ತು 1 ಕೆ.ಜಿ ಬೇಳೆಯನ್ನು ಉಚಿತವಾಗಿ ಪಡೆಯುತ್ತಾರೆ. ಮೋದಿ ಸರ್ಕಾರ ಕೋವಿಡ್ ಕಾಲಘಟ್ಟದಲ್ಲಿ ಈ ಯೋಜನೆ ತಂದಿತ್ತು. ನಂತರ ಈ ಯೋಜನೆಯನ್ನು ಮುಂದುವರಿಸಿಕೊಂಡು ಬಂದಿದೆ. ಮೇ ತಿಂಗಳಲ್ಲಿ ಈ ಯೋಜನೆಯ ಲಾಭ ಫಲಾನುಭವಿಗಳಿಗೆ ಸಿಗಲಿದೆ.
2. ಪಿಎಂ ಸೂರ್ಯು ಘರ್ ಉಚಿತ ವಿದ್ಯುತ್ ಯೋಜನೆ
ಈ ಯೋಜನೆಯಡಿ 1 ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯುನಿಟ್ ಉಚಿತ ವಿದ್ಯುತನ್ನು ಸೋಲಾರ್ ರೂಫ್ ಟಾಪ್ ಸಿಸ್ಟಮ್ ಮೂಲಕ ನೀಡಲಾಗುತ್ತದೆ. ಈ ಯೋಜನೆಯಿಂದ ಮನೆಗೆ ವರ್ಷಕ್ಕೆ 15 ರಿಂದ 18 ಸಾವಿರ ರೂ ಉಳಿತಾಯವಾಗುತ್ತದೆ.
3. ಯುನೈಫೈಡ್ ಪೆನ್ಷನ್ ಸ್ಕೀಮ್ ಈ ಯೋಜನೆಯಡಿ ಕೇಂದ್ರ ಸರ್ಕಾರಿ ನೌಕರರಿಗೆ ಕನಿಷ್ಠ ಮಾಸಿಕ ಪಿಂಚಣಿ 10 ಸಾವಿರ ರೂ. ನೀಡಲಾಗುತ್ತದೆ. ನೌಕರರು ತಮ್ಮ ಮೂಲ ವೇತನ ಮತ್ತು ತುಟ್ಟಿ ಭತ್ಯೆಯ 10% ರಷ್ಟು ಕೊಡುಗೆ ನೀಡಬೇಕು. ಅಸ್ತಿತ್ವದಲ್ಲಿರುವ NPS ಕವರ್ ಹೊಂದಿರುವ ಉದ್ಯೋಗಿಗಳು ಮತ್ತು ಏಪ್ರಿಲ್ 1, 2025 ರ ನಂತರ ನೇಮಕಗೊಂಡವರು ಅರ್ಹರಾಗಿರುತ್ತಾರೆ. ನಿವೃತ್ತಿಯ ನಂತರ ಈ ಯೋಜನೆಯಿಂದ ಆರ್ಥಿಕ ಭದ್ರತೆ ಸಿಗುತ್ತದೆ.
4. ಜಿಎಸ್‌ಟಿ ವಿನಾಯ್ತಿ ಕೇಂದ್ರ ಸರ್ಕಾರ ಹಲವು ವಸ್ತುಗಳಿಗೆ ಜಿಎಸ್‌ಟಿ ವಿನಾಯ್ತಿ ನೀಡಿದೆ. ಈ ವಿನಾಯ್ತಿ ಮೇ ತಿಂಗಳಲ್ಲಿ ಮುಂದುವರಿಯಲಿದೆ. ತಾಜಾ ಹಾಲು, ಮೊಸರು, ಮೊಟ್ಟೆ, ಹಣ್ಣು-ತರಕಾರಿ ಮೇಲೆ ಸಂಪೂರ್ಣ ಜಿಎಸ್‌ಟಿ ವಿನಾಯ್ತಿ ಒದಗಿಸಲಾಗಿದೆ. ಎಲ್‌ಸಿಡಿ, ಎಲ್‌ಇಡಿ ಕಾಂಪೊನೆಟ್ಸ್ ಮೇಲೆ ಶೇ.5ರಷ್ಟು ವಿನಾಯ್ತಿ.
5. ಟಿಡಿಎಸ್ ಲಿಮಿಟ್ ಹೆಚ್ಚಳ
- ಹಿರಿಯ ನಾಗರಿಕರಿಗೆ ಬಡ್ಡಿ ಮೇಲಿನ ಟಿಡಿಎಸ್ ಮಿತಿ 50 ಸಾವಿರ ರೂ ಯಿಂದ 1 ಲಕ್ಷ ರೂ.ವರೆಗೆ ಏರಿಕೆ
- ಡಿವಿಡೆಂಡ್ ಮೇಲೆ 5 ರಿಂದ 10 ಸಾವಿರ ರೂ.ಗಳಿಗೆ ಏರಿಕೆ
- ವಾರ್ಷಿಕ ಬಾಡಿಗೆ ಮೇಲೆ 2,40,00 ರೂ.ಗಳಿಂದ 6,00,000 ರೂಪಾಯಿಗೆ ಏರಿಕೆ
- ಪ್ರೊಫೆಷನಲ್ ಅಥವಾ ಟೆಕ್ನಿಕ್ ಸೇವೆಗಳ ಶುಲ್ಕದ ಮೇಲಿನ ಟಿಡಿಎಸ್ ಮಿತಿ 30 ರಿಂದ 50 ಸಾವಿರಕ್ಕೆ ಏರಿಕೆ
6. ನ್ಯೂ ಸ್ಕಿಲಿಂಗ್ ಪ್ರೋಗ್ರಾಂ ಮುಂದಿನ 5 ವರ್ಷಗಳಲ್ಲಿ ಈ ಯೋಜನೆಯಡಿ 20 ಲಕ್ಷ ಯುವಕ/ಯುತಿಯರಿಗೆ ತರಬೇತಿ ನೀಡಲಾಗುವುದು. ಈ ವಿಶೇಷ ತರಬೇತಿಯಿಂದ ಯುವ ಸಮುದಾಯಕ್ಕೆ ಉದ್ಯೋಗ ಪಡೆದುಕೊಳ್ಳಲು ಸಹಾಯವಾಗುತ್ತದೆ. ಸ್ಕೂಲ್-ಕಾಲೇಜ್ ಡ್ರಾಪ್ ಔಟ್, ನಿರುದ್ಯೋಗಿಗಳು ಈ ಯೋಜನೆ ಮೂಲಕ ತರಬೇತಿ ಪಡೆದು ಕುಶಲಕರ್ಮಿಗಳಾಗಬಹುದು.
7. ಇನ್‌ಟರ್ನ್‌ಶಿಪ್ ಸ್ಕೀಮ್ ಮುಂದಿನ 5 ವರ್ಷದಲ್ಲ 1 ಕೋಟಿ ಯುವ ಜನತೆಗೆ ಉಚಿತವಾಗಿ ಇಂಟರ್ನ್‌ಶಿಪ್ ನೀಡಲಾಗುತ್ತದೆ. ಈ ವೇಳೆ ಶಿಷ್ಯವೇತನ ಸಹ ನೀಡಲಾಗುತ್ತದೆ. ಇನ್‌ಟರ್ನ್‌ಶಿಪ್ ಬಳಿಕ ಅಲ್ಲಿಯೇ ಉದ್ಯೋಗ ಸಿಗುವ ಸಾಧ್ಯತೆಗಳಿರುತ್ತವೆ.
8. ಕ್ರೆಡಿಟ್ ಗ್ಯಾರಂಟಿ ಸ್ಕೀಮ್ ಈ ಯೋಜನೆಯಡಿಯಲ್ಲಿ ಯಾವುದೆ MSMEsಗೆ ಯಾವುದೆ ಗ್ಯಾರಂಟಿ ಇಲ್ಲದೆ 100 ಕೋಟಿ ರೂ ವರೆಗೆ ಸಾಲ ದೊರೆಯುತ್ತದೆ. ಈ ಮೂಲಕ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಉತ್ತೆಜನ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ.
9. ಉಚಿತ ಆರೋಗ್ಯ ವಿಮೆ ಈ ಯೋಜನೆಯಡಿ ಹೆಲ್ತ್ ವರ್ಕರ್‌ಗೆ 50 ಲಕ್ಷ ರೂ.ವರೆಗಿನ ಆರೋಗ್ಯ ವಿಮೆ ಸಿಗಲಿದೆ. ಕೋವಿಡ್ 19 ಅಥವಾ ಕರ್ತವ್ಯದಲ್ಲಿದ್ದಾಗ ಮೃತರಾದ್ರೆ ಕುಟುಂಬಕ್ಕೆ ಆರ್ಥಿಕ ನೆರವು ದೊರೆಯಲಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ಹೆಲ್ತ್ ವರ್ಕರ್‌ಗೆ ಈ ಯೋಜನೆಯ ಲಾಭ ಸಿಗಲಿದೆ.
10. ಉಜ್ವಲ ಯೋಜನೆ ಈ ಯೋಜನೆಯಡಿ ಬಡವರಿಗೆ ಉಚಿತವಾಗಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಕೆನಕ್ಷನ್ ನೀಡಲಾಗುತ್ತದೆ. ಈ ಯೋಜನೆ ಮೇ ತಿಂಗಳಲ್ಲಿ ಮುಂದುವರಿಯಲಿದೆ.