ತೆಂಗಳಿ: ರಂಜಾನ್ ಹಬ್ಬದ ಪ್ರಯುಕ್ತ ಉಪವಾಸ ವೃತ ಮಾಡುವ ಮುಸ್ಲಿಂ ಬಾಂಧವರಿಗೆ ಭೀಮೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ರವಿವಾರ ಹಣ್ಣು ಮತ್ತು ಖಜೂರಿ ವಿತರಿಸಲಾಯಿತು.
ಕಾಳಗಿ ತಾಲೂಕಿನ ತೆಂಗಳಿ ಗ್ರಾಮದ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಗೆ ಹಣ್ಣು ಮತ್ತು ಖಜೂರಿ ವಿತರಿಸಲಾಯಿತು.
ಭೀಮೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವೀರೇಂದ್ರ ವಾಲಿ ಮಾತನಾಡಿ, ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಉಪವಾಸ ವೃತ ಕೈಗೊಳ್ಳುತ್ತಾರೆ. ಈ ವರ್ಷವು ಉಪವಾಸ ವೃತ ಆರಂಭಿಸಲಾಗಿದೆ. ಒಂದು ತಿಂಗಳ ಕಾಲ ಉಪವಾಸ ಮಾಡುತ್ತಾರೆ ಎಂದರು.
ತೆಂಗಳಿ ಎಂಬುದು ಒಂದು ಕುಟುಂಬ ಇದ್ದಂತೆ, ಜಾತಿಗಳು ಎಂಬುದು ಆಣ್ಣ ತಮ್ಮಂದಿರ ತರಹ. ಎಲ್ಲಾ ಸಮಾಜ ಬಾಂಧವರು ಒಗ್ಗಟ್ಟಿನಿಂದ ಅವರ ಹಬ್ಬ ನಾವು, ನಮ್ಮ ಹಬ್ಬ ಅವರು ಆಚರಿಸುತ್ತೆವೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಶರಣಪ್ಪ ತೆಲಗಾಣಿ, ವಿಶ್ವನಾಥ ಬಾಳದೆ, ಸಂಗಮೇಶ, ಶಿವಶರಣ ಕೇಶ್ವಾರ, ಅಕ್ಬರಸಾಬ ಆಫಖಾನ, ಅಹ್ಮದಸಾಬ ಅತ್ತಾರ, ಅಬ್ದುಲ್ ರೌಫ, ಅಬ್ದುಲ್ ಅನೀಸ, ಮಹ್ಮದ ನದಾಫ್, ಮಹೆಬೂಬ ಟೇಲರ್, ಇನ್ನುಸ ಆಫಖಾನ ಸೇರಿದಂತೆ ಅನೇಕರು ಇದ್ದರು.