ಡಾ.ಎಚ್.ತಿಪ್ಪೇರುದ್ರಸ್ವಾಮಿ ಬಹುಮುಖ ಸಾಹಿತಿ

ಜಿಲ್ಲೆ

ಕಲಬುರಗಿ: ಡಾ.ಹೊನ್ನಾಳಿ ತಿಪ್ಪೇರುದ್ರಸ್ವಾಮಿ ಅವರು ಕವಿ, ಲೇಖಕ, ಪ್ರಾಧ್ಯಾಪಕ. ಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ ಹೀಗೆ ಬಹುಮುಖ ಸಾಹಿತ್ಯ ಕೃಷಿ ಮಾಡಿದ್ದಾರೆ. ವಿಶೇಷವಾಗಿ ಶರಣರ ಮಹನೀಯರ ಕುರಿತು ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ ಪಾಟೀಲ ಹೇಳಿದರು.

ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಏರ್ಪಡಿಸಿದ್ದ ‘ಡಾ.ಎಚ್.ತಿಪ್ಪೇರುದ್ರಸ್ವಾಮಿಯವರ 97ನೇ ಜನ್ಮದಿನಾಚಣೆ’ಯಲ್ಲಿ ಮಾತನಾಡಿದ ಅವರು, ಡಾ. ತಿಪ್ಪೇರುದ್ರಸ್ವಾಮಿ ಅವರು ‘ಪರಿಪೂರ್ಣದೆಡೆಗೆ’, ‘ಕದಳಿತ ಕರ್ಪೂರ’, ‘ಜ್ಯೋತಿ ಬೆಳಗಿತು’, ‘ನೆರಳಾಚೆಯ ಬದುಕು’, ‘ಜಡದಲ್ಲಿ ಜಂಗಮ’ ಎಂಬ ಐತಿಹಾಸಿಕ ಕಾದಂಬರಿಗಳು, ‘ತಪೋರಂಗ’ ಕವನ ಸಂಕಲನ, ‘ಸಾಹಿತ್ಯ ಚಿತ್ರಗಳು’ ಕಥಾ ಸಂಕಲನ, ‘ವಿಧಿಪಂಜರ’ ನಾಟಕ, ‘ತೌಲನಿಕ ಕಾವ್ಯ ಮೀಮಾಂಸೆ’, ‘ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ’, ‘ಸಾಹಿತ್ಯ ವಿಮರ್ಶೆಯ ಮೂಲ ತತ್ವಗಳು’, ‘ಕರ್ನಾಟಕ ಸಂಸ್ಕೃತಿ ಸಮೀಕ್ಷೆ’, ‘ಸಾಹಿತ್ಯ ಮತ್ತು ಸಮಕಾಲೀನ ವಾಸ್ತವಿಕತೆ’ ಎಂಬ ವಿಮರ್ಶೆ/ವೈಚಾರಿಕ ಕೃತಿಗಳನ್ನು ರಚಿಸಿದ್ದಾರೆ. ಇವರ ‘ಕರ್ನಾಟಕ ಸಂಸ್ಕೃತಿ ಸಮೀಕ್ಷೆ’ ಕೃತಿಗೆ ‘ಕೇಂದ್ರ ಸಾಹಿತ್ಯ ಅಕಾಡೆಮಿ’ ಪ್ರಶಸ್ತಿ ದೊರೆತಿದೆ ಎಂದರು.

ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಮುಖ್ಯಸ್ಥ ದತ್ತು ಹಡಪದ, ಪ್ರಮುಖರಾದ ಅನ್ಮೋಲ್ ಮಾಲಿ ಪಾಟೀಲ, ಯಶೋಧಾ, ಶ್ರೀನಿಧಿ, ಈಶ್ವರಿ, ಸೌಮ್ಯ, ಸ್ನೇಹಾ, ಶಿವಕುಮಾರ, ವೀರೆಂದ್ರ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *