ಚಿತ್ತಾಪುರ: ಕಣ್ಣು ಜೀವನ ಪ್ರಮುಖ ಅಂಗವಾಗಿದೆ. ಇದರ ಬಗ್ಗೆ ನಿರ್ಲಕ್ಷ್ಯ ಬೇಡ, ಕಣ್ಣಿನ ಬಗ್ಗೆ ತೀವ್ರ ಕಾಳಜಿ ವಹಿಸಬೇಕು ಎಂದು ಕಲಬುರ್ಗಿ ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆಯ ನೇತೃ ತಜ್ಞ ಡಾ. ನಾಗರಾಜ್ ಗವಿಮಠ ಹೇಳಿದರು.
ತಾಲೂಕಿನ ಅಳ್ಳೊಳ್ಳಿ ಗ್ರಾಮದಲ್ಲಿ ಕಲಬುರಗಿಯ ಸಿದ್ದರಾಮೇಶ್ವರ ಆಸ್ಪತ್ರೆ ಮತ್ತು ವಿಶ್ವ ಜನ ಸೇವಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಜ್ಞಾನಜ್ಯೋತಿ ಶಾಲೆ ಸಾವಿರ ದೇವರ ಸಂಸ್ಥಾನ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆಯು ಸಮಾಜಮುಖಿ ಕೆಲಸ ಮಾಡುತ್ತಿದೆ, ಈಗಾಗಲೇ ಆಸ್ಪತ್ರೆಯಿಂದ ಸುಮಾರು ಎರಡು ಲಕ್ಷ ಜನರಿಗೆ ನೇತ್ರ ತಪಾಸಣೆ ಮಾಡಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಕಣ್ವ ನಾಯಕ್ ಮಾತನಾಡಿ, ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆಯವರು ಗ್ರಾಮೀಣ ಭಾಗಕ್ಕೆ ತೆರಳಿ ಉಚಿತ ನೇತ್ರ ತಪಾಷಣೆ ಶಿಬಿರ ಮಾಡಿ ಕಡಿಮೆ ವೆಚ್ಚದಲ್ಲಿ ಶಸ್ತ್ರ ಚಿಕಿತ್ಸೆ ಮಾಡುತ್ತಿರುವದು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ
ವಿಶ್ವನಾಥ್ ರೆಡ್ಡಿ ಅವರ ಸಾಮಾಜಿಕ ಕಳಕಳಿ ಎತ್ತಿ ತೋರಿಸುತ್ತಿದೆ ಎಂದರು.
ವಿಶ್ವ ಜನ ಸೇವಾ ಸಂಸ್ಥೆಯ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರವರು ಮಾತನಾಡಿ, ವಿಶ್ವ ಜನ ಸೇವಾ ಸಂಸ್ಥೆಯು ಕಳೆದ 15 ವರ್ಷಗಳಿಂದ ಈ ಭಾಗದಲ್ಲಿ ಕಲೆ, ಸಾಹಿತ್ಯ, ಸಂಗೀತ, ಆರೋಗ್ಯ ತಪಾಸಣೆ, ಮಹಿಳಾ ಸಬಲೀಕರಣ ಕುರಿತು ಅನೇಕ ಜನ ಉಪಯೋಗಿ ಕಾರ್ಯಗಳು ಮಾಡುತ್ತಿವೆ. ಈ ಸಂಸ್ಥೆಗೆ ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆ ನೇತ್ರ ತಪಾಸಣೆ ಸಂಘಟನೆಯ ಜವಾಬ್ದಾರಿ ಸಂಸ್ಥೆಗೆ ನೀಡಿದ್ದು ಹೆಮ್ಮೆಯ ವಿಷಯ ಎಂದರು.
ಗ್ರಾಮದ ಮುಖಂಡ ಮಾದೇವಪ್ಪ ದೊಣಗಾವ್, ಸಿದ್ದರಾಮೇಶ್ವರ ಆಸ್ಪತ್ರೆಯ ಸಿಬ್ಬಂದಿ ಆಕಾಶ್ ಹಾಗೂ ಮಂಜುನಾಥ್ ವೇದಿಕೆಯಲ್ಲಿದ್ದರು.
ಶಾಲೆಯ ಮುಖ್ಯಗರು ಬಸವರಾಜ್ ಹೊಟ್ಟೆ ಸ್ವಾಗತಿಸಿ ನಿರೂಪಿಸಿದರು, ಶಿಕ್ಷಕ ಸಲೀಂ ವಂದಿಸಿದರು.