ಗಣೇಶ ವಿಸರ್ಜನೆಗೂ ನೀರಿಲ್ಲದ ಸ್ಥಿತಿ: ಶಹಾಬಾದ್ ಡಿವೈಎಸ್ಪಿ ಕಳವಳ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಕಾಳಗಿ
ಈ ವರ್ಷ ಮಳೆ ಕೈಕೊಟ್ಟಿದ್ದರಿಂದ ಭೀಕರ ಬರ ಎದುರಾಗಿದೆ. ಒಂದೊಂದು ಊರಿನ ಗಣೇಶ ವಿಸರ್ಜನೆ ಜಾಗದಲ್ಲಿ ನೀರೆ ಇಲ್ಲದಂತಾಗಿ ಯೋಚಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ಹಮ್ಮಿಕೊಂಡಿದ ಗಣೇಶ ಹಬ್ಬದ ಶಾಂತಿಶಸಭೆಯ ಅಧ್ಯಕ್ಷತೆಶವಹಿಸಿ ಮಾತನಾಡಿದ ಅವರು, ಈ ಬಾರಿ ಮಳೆ ಮುನಿಸಿಕೊಂಡಿದ್ದರಿಂದ ಅನ್ನದಾತ ಕಂಗಲಾಗಿದ್ದಾನೆ. ಯಾರ ಮುಖದಲ್ಲಿಯೂ ಹುಮ್ಮಸ್ಸಿನ ಭಾವ ಕಾಣದೆ ಗಣೇಶನ ಸಂಭ್ರಮ ನೆಲಕಚ್ಚಿದಂತೆ ಕಂಡುಬರುತ್ತಿದೆ’ ಎಂದು ಅಸಮಧಾನ ಹೊರಹಾಕಿದರು.

ತಹಸೀಲ್ದಾರ್ ಪೃಥ್ವಿರಾಜ ಪಾಟೀಲ, ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ಐ ಸಿದ್ದಲಿಂಗ ಮಾತನಾಡಿದರು.

ತಾ.ಪಂ ಸಹಾಯಕ ನಿರ್ದೇಶಕ ಗಂಗಾಧರ ವಿಶ್ವಕರ್ಮ, ಪ.ಪಂ ಕಿರಿಯ ಆರೋಗ್ಯ ನಿರೀಕ್ಷಕ ರವೀಂದ್ರ ತಳಕೇರಿ, ಜೆಸ್ಕಾಂನ ವಿಜಯಕುಮಾರ ಪೂಜಾರಿ, ಮುಖಂಡ ಜಾವೋದ್ದಿನ್ ಸೌದಾಗರ ಮಾತನಾಡಿದರು.

ಪಂಚ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ, ಜಗನ್ನಾಥ ಚಂದನಕೇರಿ, ಪ್ರಶಾಂತ ಕದಂ, ಸಂತೋಷ ನರನಾಳ, ದತ್ತಾತ್ರೇಯ ಜಂಬಗಿ, ಪುರುಷೋತ್ತಮ ಗುತ್ತೇದಾರ, ವಿಠಲ ಸೇಗಾಂವಕರ್, ಭದ್ರಪ್ಪ ಬಡಿಗೇರ, ಸುಂದರ ಸಾಗರ, ಕಾಳಪ್ಪ ಕರೆಮನೋರ ಇದ್ದರು.

Leave a Reply

Your email address will not be published. Required fields are marked *