ಸುದ್ದಿ ಸಂಗ್ರಹ

ಶಾಂತಶ್ರೀ ಪ್ರಶಸ್ತಿಗೆ ಸಂಗಮೇಶ ಬಾದವಾಡಗಿ, ಮಹಿಪಾಲರೆಡ್ಡಿ ಮುನ್ನೂರ್ ಆಯ್ಕೆ…..ದಿ.ಶಾಂತಪ್ಪಾ ಪಾಟೀಲ ನರಿಬೋಳ ಅವರ ಪುಣ್ಯಸ್ಮರಣೆ ಪ್ರಯುಕ್ತ ನೀಡಲಾಗುವ ಶಾಂತಶ್ರೀ ಪ್ರಶಸ್ತಿಗೆ ಲೇಖಕ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಸಂಗಮೇಶ ಬಾದವಾಡಗಿ ಹಾಗೂ ಲೇಖಕ, ಜಿಲ್ಲಾ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಶಾಂತಪ್ಪಾ ಪಾಟೀಲ ನರಿಬೋಳ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್‌ ಪಾಟೀಲ ನರಿಬೋಳ ತಿಳಿಸಿದ್ದಾರೆ……ಬೆಂಗಳೂರು ರಾಜಾಜಿ ನಗರದ ಕಾಯಕ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸೆ.12 ರಂದು ‘ಶಾಂತಶ್ರೀ ಪ್ರಶಸ್ತಿ’ ಪ್ರಾದಾನ ಕಾರ್ಯಕ್ರಮ ಜರುಗುವುದು, ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರದ 20 ಸಾಧಕರಿಗೆ ವಿಶೇಷ ಸನ್ಮಾನ ಮಾಡಲಾಗುವುದು ಎಂದರು.

Leave a Reply

Your email address will not be published. Required fields are marked *