​ಶಿಕ್ಷಕರಿಗೆ ಇನ್ನು ‘Tr’ ಗೌರವ: ಬಸವರಾಜ ಬಳೂಂಡಗಿ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಕಲಬುರಗಿ
ಶಿಕ್ಷಕರು ಇನ್ನು ಮುಂದೆ ತಮ್ಮ ಹೆಸರಿಗಿಂತ ಮೊದಲು ಟಿಆರ್‌ ಎಂಬ ಪದ ಬಳಸಲು ಅನುಮತಿಸಿ ರಾಜ್ಯ ಸರಕಾರ ಅಧಿಕೃತ ಆದೇಶ ನೀಡಿದ್ದಕ್ಕೆ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಸ್ವಾಗತಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿದ ಅವರು, ಉತ್ತಮ ಸಮಾಜ ನಿರ್ಮಾಣಕ್ಕೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಶಿಕ್ಷಕರ ಅತ್ಯಮೂಲ್ಯ ಕೊಡುಗೆಯನ್ನು ಪರಿಗಣಿಸಿ ಗೌರವಪೂರ್ವಕವಾಗಿ ಈ ಪದ ಬಳಸಲು ಅನುಮತಿ ನೀಡಲಾಗಿದೆ’ ಎಂದು ಆದೇಶದಲ್ಲಿ ವಿವರಿಸಲಾಗಿದೆ ಎಂದರು.

ಶಿಕ್ಷಕರು ಪ್ರತಿದಿನ ಮಕ್ಕಳ ಮನಸ್ಸು ಮತ್ತು ಭವಿಷ್ಯವನ್ನು ರೂಪಿಸುತ್ತಿದ್ದಾರೆ. ಹೀಗಾಗಿ, ಅವರ ಅಮೂಲ್ಯ ಕೊಡುಗೆಯನ್ನು ಗೌರವದ ವಿಶಿಷ್ಟ ಚಿಹ್ನೆಯೊಂದಿಗೆ ಗೌರವಿಸಲು ಸರ್ಕಾರ ನಿರ್ಧರಿಸಿದೆ. ಶಿಕ್ಷಕರ ದಿನಾಚರಣೆಯಿಂದ ಶಿಕ್ಷಕರು ತಮ್ಮ ಹೆಸರಿಗಿಂತ ಮೊದಲು ‘Tr’ ಎಂಬ ಶಿರ್ಷಿಕೆಯನ್ನು ಹೆಮ್ಮೆಯಿಂದ ಬಳಸಬಹುದು. ಇದು ಕೇವಲ ಎರಡು ಅಕ್ಷರಗಳಾಗಿರದೆ, ಶಿಕ್ಷಕರ ಜೀವಿತಾವಧಿಯ ಸೇವೆಯನ್ನು ಪ್ರತಿನಿಧಿಸುತ್ತದೆ ಎಂದು ಸರ್ಕಾರ ಹೇಳಿದೆ ಎಂದರು.

ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಲಕ್ಷಾಂತರ ಶಿಕ್ಷಕರ ವೃಂದದಲ್ಲಿ ಈ ಆದೇಶ ಹೊರಡಿಸಿದ್ದು ಅಪಾರ ಸಂತಸ ಮೂಡಿಸಿದೆ. ದೇಶದ ಪ್ರಗತಿಯಲ್ಲಿ ಶಿಕ್ಷಕರ ಕೊಡುಗೆ ಪರಿಗಣಿಸಿ ‘Tr’ ಎಂಬ ಶೀರ್ಷಿಕೆ ಬಳಸಲು ಮಹತ್ವದ ತೀರ್ಮಾನಕ್ಕೆ ಸರಕಾರಕ್ಕೆ ಕೃತಜ್ಞತೆಗಳು ಎಂದು ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಪದಾಧಿಕಾರಿ ಗಳಾದ ಚಂದ್ರಕಾಂತ ಏರಿ, ಶ್ರೀಮಂತ ಪಟ್ಟೇದಾರ್, ಧರ್ಮರಾಯ ಜವಳಗಿ, ಪ್ರಕಾಶ ಉದನೂರ ಕೃಷ್ಣಾಚಾರಿ, ಎಂ.ಬಿ.ಪಾಟೀಲ್, ಸುರೇಶ, ಸಿದ್ದಲಿಂಗಯ್ಯ ಮಠಪತಿ, ಅಣ್ಣಾರಾವ ಹಾಬಾಳಕ‌ ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *