ರಾಜ್ಯದ ಮತದಾರರಿಗೆ ಗುಡ್ ನ್ಯೂಸ್‌: ರಾಜ್ಯದಲ್ಲಿ ನಡೆಯಲಿದೆ ಸ್ಪೆಷಲ್ SIR ಕ್ಯಾಂಪ್

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಬೆಂಗಳೂರು
ರಾಜ್ಯದ ಮತದಾರರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ, ರಾಜ್ಯದಲ್ಲಿ ಸ್ಪೆಷಲ್‌ ಎಸ್‌ಐಆರ್‌ ಕ್ಯಾಂಪ್‌ ನಡೆಯಲಿದೆ.

ರಾಜ್ಯದಲ್ಲಿ ಒಂದು ಕೋಟಿ ಎಂಟು ಲಕ್ಷ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯುವ ಆತಂಕ ಎಸ್‌ಐಆರ್ ಸರ್ವೆಯಲ್ಲಿ ಗೊತ್ತಾಗಿದೆ. ಹೀಗಾಗಿ ಖುದ್ದು ಸಿಎಂ ಆವರೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ರು. ಇದರ ಬೆನ್ನಲ್ಲೆ ಈಗ ರಾಜ್ಯ ಚುನಾವಣಾ ಆಯೋಗ ರಾಜ್ಯದ ಮತದಾರರಿಗೆ ಗುಡ್ ನ್ಯೂಸ್‌ ನೀಡಿದೆ. ರಾಜ್ಯದಲ್ಲಿ ಸ್ಪೆಷಲ್ SIR ಕ್ಯಾಂಪ್ ನಡೆಸಲು ಸಜ್ಜಾಗಿದೆ.

ಆ.29, 30 ಮತ್ತು ಸೆ.19, 20 ರಂದು ನಡೆಯಲಿದೆ. ಅಂದು ಕ್ಯಾಂಪ್‌ನಲ್ಲಿ ಬಿಎಲ್‌ಓಗಳು ಭಾಗಿಯಾಗಲಿದ್ದಾರೆ. ಫಾರ್ಮ್- 6, 6a, ಫಾರ್ಮ್- 7, ಫಾರ್ಮ್- 8 ವಿತರಣೆ ಮಾಡಲಿದ್ದು, ಈ ಕ್ಯಾಂಪ್‌ನಲ್ಲಿ ಕೈಬಿಟ್ಟು ಹೋದ ಮತದಾರರಿಗೆ ಮತ್ತೆ ಸೇರ್ಪಡೆಗೆ ಅವಕಾಶ ಸಿಗಲಿದೆ.

Leave a Reply

Your email address will not be published. Required fields are marked *