ಐವರು ಪತ್ರಕರ್ತರಿಗೆ ಕಾಗಲಕರ್ ಪ್ರಶಸ್ತಿ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ವಿ.ಎನ್ ಕಾಗಲಕರ್ ಪ್ರಶಸ್ತಿಗೆ ಐವರು ಹಿರಿಯ ಪತ್ರಕರ್ತರು ಮತ್ತು ವಾರ್ಷಿಕ ಪ್ರಶಸ್ತಿಗೆ 25 ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಫಿರೋಜಾಬಾದ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಜಕುಮಾರ ಉದನೂ‌ರ್ ತಿಳಿಸಿದ್ದಾರೆ.

ಹಿರಿಯ ಪತ್ರಕರ್ತರಾದ ಪ್ರಭಾಕರ ಜೋಶಿ, ಚಂದ್ರಶೇಖರ ಕೌಲಗಾ, ಪ್ರವೀಣರೆಡ್ಡಿ, ದೇವಿಂದ್ರಪ್ಪ ಅವಂಟಿ ಮತ್ತು ಚಂದ್ರಕಾಂತ ಹುಣಸಗಿ ಅವರನ್ನು ವಿ.ಎನ್ ಕಾಗಲಕರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 2025 ಮತ್ತು 2026ನೇ ಸಾಲಿನ ಎರಡು ವರ್ಷದ ವಾರ್ಷಿಕ ಪ್ರಶಸ್ತಿಗಳಿಗೆ ಪತ್ರಕರ್ತ ಸಂಗಮನಾಥ ರೇವತಗಾಂವ, ಸಂತೋಷ ನಾಡಗೇರಿ ಬ್ರಹ್ಮಾನಂದ ಅರಳಿ, ರಮೇಶ ಮೇಳಕುಂದಾ, ಬಾಬುರಾವ ಕೊಬಾಳ, ಮಹ್ಮದ್ ಮಶಾಕ್, ಶಿವಕುಮಾರ ಕುಸಾಳೆ, ನಾಗರಾಜ ಗದ್ದಿ, ಸೋಮೇಶಗೌಡ, ಭೀಮಣ್ಣ ಬಾಲಯ್ಯ, ದತ್ತಾತ್ರೇಯ ಪಾಟೀಲ್, ಮಲ್ಲಿಕಾರ್ಜುನ ಜೋಗ, ಮೋಹಿಜ್ ಪಟೇಲ್, ಶರಣು ಪೂಜಾರಿ, ಸಂಗಮೇಶ ಹಿರೇಮಠ, ಶಿವಕುಮಾರ ಹಳ್ಳಿಖೇಡ, ಭೀಮಪ್ಪ, ಫಿರೋಜ್ ಅಹ್ಮದ್, ದಸ್ತಗೀರ ನದಾಫ್, ಸಾ.ಸಿ ಬೆನಕನಳ್ಳಿ, ಶರಣು ಮಹಾಗಾಂವ, ವಿಜಯಕುಮಾರ ಜಿಡಗಿ, ಮಂಜುನಾಥ ದೊಡ್ಡಮನಿ ಮತ್ತು ಪ್ರಕಾಶ ಜಂಗಲೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

ವಿ.ಎನ್ ಕಾಗಲಕರ್ ಪ್ರಶಸ್ತಿಯು ಐದು ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಮತ್ತು ಸನ್ಮಾನ ಒಳಗೊಂಡಿದೆ. ವಾರ್ಷಿಕ ಪ್ರಶಸ್ತಿಯು ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಸನ್ಮಾನ ಒಳಗೊಂಡಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *