ಹವಾಮಾನ ವೈಪರಿತ್ಯ: ಆಕಾಶದಲ್ಲೇ 40 ನಿಮಿಷ ಗಿರಕಿ ಹೊಡೆದ Fly 91 ವಿಮಾನ

ಜಿಲ್ಲೆ

ಸುದ್ದಿ ಸಂಗ್ರಹ ಹುಬ್ಬಳ್ಳಿ
ಪ್ಲೈ 91 (Fly 91) ವಿಮಾನಕ್ಕೆ ಮತ್ತೆ ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್ ಸಮಸ್ಯೆ ಎದುರಾಗಿದೆ. ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಆಗಸದಲ್ಲಿಯೇ ಹಲವು ಸುತ್ತು ಹೊಡೆದು 40 ನಿಮಿಷ ತಡವಾಗಿ ವಿಮಾನ ಲ್ಯಾಂಡ್‌ ಆಗಿದೆ.

ಏ.25 ರಂದು ಶನಿವಾರ ಹೈದ್ರಾಬಾದ್‌ನಿಂದ ಹುಬ್ಬಳ್ಳಿಗೆ ಆಗಮಿಸಿದ್ದ ಪ್ಲೈ 91 ಸಂಸ್ಥೆಯ ಐಸಿ 3401 ವಿಮಾನಕ್ಕೆ ಲ್ಯಾಂಡಿಂಗ್ ಸಮಸ್ಯೆ ಎದುರಾಗಿತ್ತು. ಮಧ್ಯಾಹ್ನ 3:13ಕ್ಕೆ ಹೈದರಾಬಾದ್‌ ಬಿಟ್ಟಿದ್ದ ವಿಮಾನ ಸಂಜೆ 4:30ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಹವಾಮಾನ ವೈಪರಿತ್ಯದಿಂದ ಆಕಾಶದಲ್ಲಿ ಹಲವು ಸುತ್ತು ಗಿರಕಿ ಹೊಡೆದು 5:09 ಗಂಟೆಗೆ ಲ್ಯಾಂಡ್ ಆಗಿದೆ.

ಬೆಳಗಾವಿ, ಬೈಲಹೊಂಗಲ ಸೇರಿದಂತೆ ಅನೇಕ ಕಡೆ ಆಗಸದಲ್ಲಿ ವಿಮಾನ ಸುತ್ತು ಹೊಡೆದಿದೆ. ಕಳೆದ ವಾರ ಕೂಡಾ Fly 91 ವಿಮಾನ ಎರಡು ಬಾರಿ ಲ್ಯಾಂಡಿಂಗ್ ಸಮಸ್ಯೆ ಎದುರಿಸಿತ್ತು.

Leave a Reply

Your email address will not be published. Required fields are marked *