ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಕೇಸ್: ಮಡಿವಾಳ ಪೊಲೀಸರಿಂದ ಮೂವರ ಬಂಧನ 

ರಾಜ್ಯ

ಸುದ್ದಿ ಸಂಗ್ರಹ ಬೆಂಗಳೂರು 
ಖಾಸಗಿ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಪರಿ ವೀಕ್ಷಕರಾದ ಸರಿತಾ, ಗಿರಿಜಮ್ಮ, ಪರೀಕ್ಷಾ ಕೇಂದ್ರದ ಉಸ್ತುವಾರಿ ಸುಧಾಕರ್ ಬಂಧಿತ ಆರೋಪಿಗಳು. ವಿದ್ಯಾರ್ಥಿ ನೀಡಿದ ದೂರಿನ ಅನ್ವಯ ಬಿಎನ್‌ಎಸ್ 299, 302 ರೆಡ್ ವಿತ್ 3 and 5 ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ. 

ನಿನ್ನೆ ಸಿಇಟಿ ಪರೀಕ್ಷೆ ವೇಳೆ ಮಡಿವಾಳದ ಕೃಪನಿಧಿ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿಗಳಿಗೆ ಜನಿವಾರ ಧರಿಸಲು ಅವಕಾಶ ಇಲ್ಲ. ತೆಗೆದು ಪರೀಕ್ಷೆ ಬರೆಯಬೇಕು.. ಇಲ್ಲವೇ ಮನೆಗೆ ಹೋಗಿ ಅಂತಾ ಬೆದರಿಸಿದ್ದರು. ಈ ವೇಳೆ ವಿದ್ಯಾರ್ಥಿಗಳು ಜನಿವಾರ ತೆಗೆದು ಪರೀಕ್ಷೆಗೆ ಹಾಜರಾಗಿದ್ದರು.

Leave a Reply

Your email address will not be published. Required fields are marked *