ಸುದ್ದಿ ಸಂಗ್ರಹ ಬೆಂಗಳೂರು
ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫಲಿತಾಂಶ ಪ್ರಕಟಗೊಂಡಿದ್ದು, ಇತಿಹಾಸದಲ್ಲಿ ಇದೆ ಮೊದಲಬಾರಿಗೆ ಶೇ.94.10ರಷ್ಟು ಫಲಿತಾಂಶ ಪ್ರಕಟವಾಗಿದೆ. ಈಗಾಗಲೆ ಇಲಾಖೆ ವೆಬ್ ಸೈಟ್ ನಲ್ಲೂ (web: https://karresults.nic.in/) ಪರೀಕ್ಷಾ ಮಂಡಳಿ ಫಲಿತಾಂಶ ಪ್ರಕಟ ಮಾಡಿದೆ. SMS, ವಾಟ್ಸಪ್ ಮೂಲಕವೂ ಫಲಿತಾಂಶ ಕಳುಹಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಈ ಬಾರಿ ಪರೀಕ್ಷೆಗೆ ಹಾಜರಾಗಿದ್ದ 7,70,209 ವಿದ್ಯಾರ್ಥಿಗಳ ಪೈಕಿ, 7,24,794 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದರು.
ಇದರಲ್ಲಿ 3,77,922 (96.18%) ಬಾಲಕಿಯರು, 3,46,871 (91.94%) ಬಾಲಕರು ಉತ್ತೀರ್ಣರಾಗಿದ್ದಾರೆ. ವಿಶೇಷವೆಂದರೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದರೂ, ಬಾಲಕರ ಫಲಿತಾಂಶದಲ್ಲಿ ಮಹತ್ತರ ಬದಲಾವಣೆ ಕಂಡುಬಂದಿದೆ. ಅದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೆನೆ ಎಂದು ಶ್ಲಾಘಿಸಿದರು.
ಈ ಬಾರಿ ನಗರ ಭಾಗದ 3,05,533 (93.2%) ವಿದ್ಯಾರ್ಥಿಗಳು, ಗ್ರಾಮೀಣ ಭಾಗದ 4,19,261 (94.80%) ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಈ ಪೈಕಿ 68,207 ಮಕ್ಕಳು A+, 1,30,403 ಮಕ್ಕಳು ʻAʼ ಗ್ರೇಡ್ (ಮಾನ್ಯತೆ) ಪಡೆದುಕೊಂಡಿದ್ದಾರೆ. 1,40,963 ವಿದ್ಯಾರ್ಥಿಗಳು B+, 1,42,645 ಮಕ್ಕಳು B ಮಾನ್ಯತೆ ಪಡೆದರೆ, 1,28,722 ಮಕ್ಕಳು 1,13,854 ಮಕ್ಕಳು C ಮಾನ್ಯತೆ ಪಡೆದು ಉತ್ತೀರ್ಣರಾಗಿದ್ದಾರೆ ಎಂದು ವಿವರಿಸಿದರು.