ಸುದ್ದಿ ಸಂಗ್ರಹ ಕಾಳಗಿ
ಸಿಡಿಲು ಬಡಿದ ಪರಿಣಾಮ ತಾಲೂಕಿನ ಟೆಂಗಳಿ ಗ್ರಾಮದಲ್ಲಿ ಒಂದು ಎತ್ತು ಬಲಿಯಾದ ಘಟನೆ ಮಂಗಳವಾರ ನಡೆದಿದೆ.
ಮನೆಯ ಎದುರುಗಡೆ ಕಟ್ಟಿದ್ದ ಎತ್ತಿಗೆ ಸಿಡಿಲು ಬಡಿದು ಮೃತಪಟ್ಟಿದೆ.
ರೈತ ಅಜೀಮ್ ಕುಕ್ಕುಂದ ಎಂಬವರಿಗೆ ಸೇರಿದ ಎತ್ತು ಮೃತಪಟ್ಟಿದೆ. 1.20 ಲಕ್ಷ ರೂ. ಬೆಲೆಯದ್ದು ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತಂತೆ ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.