ಮಾ.6ರಂದು ಚಿತ್ತಾಪುರದಲ್ಲಿ ಸರಕಾರಿ ನೌಕರರ ಸಂಘದ ಮಹಾಸಭೆ: ಬಸವರಾಜ ಬಳೊಂಡಗಿ

ಪಟ್ಟಣದ

ಸುದ್ದಿ ಸಂಗ್ರಹ ಚಿತ್ತಾಪುರ
ಪಟ್ಟಣದ ರೈಲ್ವೆ ಸ್ಟೇಷನ್ ಹತ್ತಿರದ ಪಶುಪಾಲನೆ ಇಲಾಖೆಯ ಸಭಾಂಗಣದಲ್ಲಿ ಮಾ.6 ರಂದು ಶುಕ್ರವಾರ ಮಧ್ಯಾಹ್ನ 1.30ಕ್ಕೆ 2024-25ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಆಯೋಜಿಸಲಾಗಿದೆ ಎಂದು ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೊಂಡಗಿ ತಿಳಿಸಿದ್ದಾರೆ.

ಸಭೆಯಲ್ಲಿ ಸಂಘದ ಕಾರ್ಯಕಲಾಪಗಳ ವರದಿ ಮಂಡನೆ, ಸಂಘದ ಲೆಕ್ಕಪತ್ರಗಳ ಅಡಿಟ್ ವರದಿ ಮಂಡನೆ, ವಿವಿಧ ಇಲಾಖೆ ಪ್ರತಿನಿಧಿಗಳ, ಪದಾಧಿಕಾರಿಗಳ ನೇಮಕ, ಪ್ರಮಾಣ ಪತ್ರ ವಿತರಣೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಅದಕ್ಕಾಗಿ ತಾಲೂಕಿನ ಸರಕಾರಿ ನೌಕರರ ಸಂಘದ ಚುನಾಯಿತ /ನಾಮನಿರ್ದೇಶಿತ ಪದಾಧಿಕಾರಿಗಳು, ಸರ್ವ ಸದಸ್ಯರು, ವೃಂದ ಸಂಘಗಗಳ ಅಧ್ಯಕ್ಷರು, ಪದಾಧಿಕಾರಿಗಳು ವಿವಿಧ ಇಲಾಖೆಯ ನೌಕರರು ಮತ್ತು ಶಿಕ್ಷಕರು ತಪ್ಪದೆ ಹಾಜರಾಗಿ ಯಶಸ್ವಿಗೊಳಿಸಬೇಕು ಎಂದು ಕೋರಿದ್ದಾರೆ.

Leave a Reply

Your email address will not be published. Required fields are marked *