Uncategorized

ಸಿದ್ದೇಶ್ವರ ಸ್ವಾಮೀಜಿ ನೆನಪಿಸಿದ ಕೃತಿ ಲೋಕಾರ್ಪಣೆ: ಡಿವೈಎಸ್ಪಿ ಶಂಕರಗೌಡ ಪಾಟೀಲ…..ಸುದ್ದಿ ಸಂಗ್ರಹ ಶಹಾಬಾದ್
ದಶಕಗಳ ಹಿಂದೆ ಈ ನೆಲದಲ್ಲಿ ನಡೆದಾಡಿದ ಸಿದ್ದೇಶ್ವರ ಸ್ವಾಮೀಜಿ ಕುರಿತು ಮತ್ತು ಬಸವಣ್ಣ ನಂತಹ ಮಹಾ ಮಾನವತಾವಾದಿಯ ಕುರಿತು ರಚಿಸಿದ ಎರಡು
ಕೃತಿಗಳು ಲೋಕಾರ್ಪಣೆ ಆಗುತ್ತಿರುವುದು ಸಂತಸದ ಸಂಗತಿ ಎಂದು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು……ನಗರದ ಶರಣಬಸವೇಶ್ವರ ಜ್ಞಾನ ವಿಕಾಸ ಪೀಠ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ನೃಪತುಂಗ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸಂಯುಕ್ತಾಶ್ರಯದಲ್ಲಿ
ಹಮ್ಮಿಕೊಳ್ಳಲಾಗಿದ್ದ ಮಂಡಲಗಿರಿ ಪ್ರಸನ್ನ ಅವರ ‘ಎಣ್ಣೆ ಬತ್ತಿಯ ಸೊಡರು’ ಮತ್ತು ‘ಮಹಾಮನೆ’ ಎರಡು ಕೃತಿಗಳು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸಿದ್ದೇಶ್ವರ
ಸ್ವಾಮೀಜಿಯ ಸರಳತೆ, ಅಪಾರ ಅಧ್ಯಯನ, ಜ್ಞಾನ ಮತ್ತು ಬಸವಣ್ಣನ ವೈಚಾರಿಕತೆ, ಸಮಾಜಮುಖಿ ಚಿಂತನೆಗಳು ಈ ಕೃತಿಯಲ್ಲಿ ಚರ್ಚಿಸಲಾಗಿದೆ. ವೃತ್ತಿ ಮತ್ತು ಪ್ರವೃತ್ತಿಗಳಲ್ಲಿ ವಿಭಿನ್ನರಾಗಿರುವ ಲೇಖಕರು ಇಂತಹ ಕೃತಿಗಳನ್ನು ನೀಡಿರುವುದು ಅವರ ಸಾಹಿತ್ಯಾಸಕ್ತಿ ತೋರಿಸುತ್ತದೆ ಎಂದರು…..’ಮಹಾಮನೆ’ ನಾಟಕ ಕೃತಿ ಲೋಕಾರ್ಪಣೆ ಮಾಡಿದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಮಾತನಾಡಿ, ಮನುಷ್ಯ ಸಮಾಜದಲ್ಲಿ ಸಮಾನತೆ, ಸಮಸಮಾಜದ ಕಲ್ಪನೆ ಹೊತ್ತು 12ನೇ ಶತಮಾನದಲ್ಲಿ ಮೊದಲ ಸಂವಿಧಾನ ನೀಡಿದ ಮಹಾನ್ ವ್ಯಕ್ತಿ ಬಸವಣ್ಣ. ಅವರ ಕನಸುಗಳನ್ನು ನನಸಾಗಿಸಲು ನಾವು ಶ್ರಮಿಸಬೇಕಿದೆ. ಮಹಾಮನೆ ಕೃತಿ ಪ್ರಸನ್ನ ಅವರ ಶರಣ ಸಾಹಿತ್ಯದ ಗಂಭೀರ ಓದಿನ ಫಲವಾಗಿದೆ. ಇಂತಹ ನಾಟಕಗಳು ಓದಿನ ಜೊತೆಗೆ ರಂಗಪ್ರಯೋಗಗಳು
ಆಗಬೇಕು ಎಂದು ಎಂದರು…..ನೃಪತುಂಗ ವೇದಿಕೆ ಸಂಚಾಲಕ ವಾಸುದೇವ ಚವ್ಹಾಣ
ಎರಡು ಕೃತಿಗಳ ಪರಿಚಯ ಮಾಡಿದರು. ಉದ್ಯಮಿ ಅಣವೀರ ಇಂಗಿನಶೆಟ್ಟಿ, ಕಸಾಪ ಅಧ್ಯಕ್ಷ ಶರಣಬಸಪ್ಪ ಕೋಬಾಳ, ಕೃತಿಕಾರ ಮಂಡಲಗಿರಿ ಪ್ರಸನ್ನ ಉಪಸ್ಥಿತರಿದ್ದರು……ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸದ್ಯಸ ಶಿವಕುಮಾರ ಇಂಗಿನಶೆಟ್ಟಿ ವಹಿಸಿದ್ದರು. ……ಈ ಸಂದರ್ಭದಲ್ಲಿ ಭರತ ಧನ್ನಾ, ಶಂಕರ ಜಾನಾ, ರಾಜೇಶ್ ಯನಗುಂಟಿಕರ್, ರಜನೀಕಾಂತ್ ಬರೂಡೆ, ಖಾಜಾ ಪಟೇಲ್, ಲೋಹಿತ್ ಕಟ್ಟಿ, ನಿಂಗಣ್ಣ ಜಂಬಗಿ, ಶಿವಕುಮಾರ ಕುಸಾಳೆ, ಬಸವರಾಜ ಹೊಸಕೇರಿ, ನಂದಾ ಹುಲಗಬಾಳಿ, ರಾಮಣ್ಣ, ರೇಷ್ಮಾ ದೋತ್ರೆ, ಪೂರ್ಣಿಮಾ ಪೂಜಾರಿ, ದೇವಕಿ ಪದವಿಪೂರ್ವ ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ……ವಿಶ್ವನಾಥ ಹಡಪದ ನಿರೂಪಿಸಿದರು, ಶರಣು ವಸ್ತ್ರದ್ ವಂದಿಸಿದರು.

Leave a Reply

Your email address will not be published. Required fields are marked *