ಸುದ್ದಿ ಸಂಗ್ರಹ ಶಹಾಬಾದ್
ಶಾಲಾ ವಾರ್ಷಿಕೋತ್ಸವವು ಮಕ್ಕಳ ಪ್ರತಿಭೆ ಅರಳಿಸುವ ವೇದಿಕೆಯಾಗಿದ್ದು, ಶಿಸ್ತು, ಸಂಸ್ಕಾರ, ಸ್ವದೇಶಿ ಸಂಸ್ಕೃತಿ, ಭಾಷಾಭಿಮಾನ ಮತ್ತು ಸಮಾಜ ಪರಿವರ್ತನೆ ಶಾಲೆಯ ಮುಖ್ಯ ಗುರಿಯಾಗಿದೆ ಎಂದು ಸಮಾಜ ಸೇವಕಿ ಜಯಶ್ರೀ ಬಸವರಾಜ ಮತ್ತಿಮೂಡ ಹೇಳಿದರು.
ತಾಲೂಕಿನ ತೋನಸನಹಳ್ಳಿ (ಎಸ್) ಗ್ರಾಮದ ಶರಣ ಗ್ರಾಮೀಣಾಬಿವೃದ್ದಿ ಶಿಕ್ಷಣ ಸಂಸ್ಥೆಯ ಕೋತಲಪ್ಪ ಮುತ್ಯಾ ಪ್ರೌಢ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮೊಬೈಲ್ ಮತ್ತು ಟಿವಿ ಕೇವಲ ವೀಕ್ಷಣೆ ಬಳಸದೆ, ಅವುಗಳಿಂದ ಜ್ಞಾನ ವಿಕಾಸದ ಪೂರಕವಾಗಿ ಬಳಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಗಮೇಶ್ವರ ಸಂಸ್ಥಾನ ಮಠದ ಪೂಜ್ಯ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಜೀವನದ ಆದರ್ಶಗಳು ಹಾಗೂ ಸಂಸ್ಕಾರಗಳನ್ನು ಬೆಳೆಸಿ, ಭವಿಷ್ಯದಲ್ಲಿ ಮಹತ್ತರ ಸಾಧನೆಗಳತ್ತ ಮುನ್ನಡೆಯುವಂತೆ ಪ್ರೇರೇಪಿಸಬೇಕು ಎಂದರು.
ಶಾಲಾ ವಾರ್ಷಿಕೋತ್ಸವದ ನೇತೃತ್ವ ವಹಿಸಿದ್ದ ಪೂಜ್ಯ ಶ್ರೀ ಕೊಟ್ಟೂರೇಶ್ವರ ಶ್ರೀಗಳು ಮಾತನಾಡಿದರು.
ವೇದಿಕೆ ಮೇಲೆ ನದಿ ಸಿನ್ನೂರಿನ ಗುರುರಾಜೇಂದ್ರ ಶಿವಯೋಗಿಗಳು, ನಗರ ಪೊಲೀಸ ಠಾಣೆ ಪಿಎಸ್ಐ ಶಾಮರಾಯ, ಬಿಜೆಪಿ ಅಧ್ಯಕ್ಷ ನಿಂಗಪ್ಪ ಹುಳಗೋಳ, ಕಾಂಗ್ರೇಸ ಮುಖಂಡ ಬಸವರಾಜ ಬೂದಿಹಾಳ, ಉದ್ದಿಮೆದಾರ ಮಹಾದೇವ ಬಂದಳ್ಳಿ, ಪ್ರಮುಖರಾದ ಸಾಬಣ್ಣ ಜಾಲಗಾರ, ಭಾಗಿರಥಿ ಗುನ್ನಾಪುರ ಇದ್ದರು.
2024-25ನೇ ಸಾಲಿನ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ಮರಣ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾಶಣ್ಣ ಚನ್ನೂರ, ದೇವೆಂದ್ರಪ್ಪ ಯಲಗೋಡ, ಭೀಮಯ್ಯ ಗುತ್ತೆದಾರ, ಸಿದ್ದು ಸಜ್ಜನ, ಬೇಳಪ್ಪ ಖಣದಾಳ, ಸಿದ್ದಣಗೌಡ ಬಮ್ಮಶೆಟ್ಟಿ, ಪ್ರಕಾಶ ರೆಡ್ಡಿ, ಸಾಬಣ್ಣ ನಾಟಿಕಾರ ಸೇರಿದಂತೆ ಶಾಲೆಯ ಶಿಕ್ಷಕ ವೃಂದದವರು ಮತ್ತು ಸಾವಿರಾರು ಜನ ಮಹಿಳೆಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಧನರಾಜ ಸ್ವಾಗತಿಸಿದರು, ಬಸವರಾಜ ಮದ್ರಕಿ ನಿರೂಪಿಸಿದರು.