ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟ ಗಿಲ್ಲಿ

ಸುದ್ದಿ ಸಂಗ್ರಹ

ತೀವ್ರ ಕುತೂಹಲ ಕೆರಳಿಸಿದ್ದ ಬಿಗ್ ಬಾಸ್ ಸೀಸನ್ 12ಕ್ಕೆ ತೆರೆ ಬಿದ್ದಿದೆ. ಬಿಗ್‌ಬಾಸ್‌ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಗಿಲ್ಲಿ ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಈ ಮೂಲಕ ಹೊಸ ದಾಖಲೆಯನ್ನೂ ಗಿಲ್ಲಿ ಬರೆದಿದ್ದಾರೆ. ಹಲವು ವಾರಗಳಿಂದ ಗಿಲ್ಲಿ ನಟನೆ ಬಿಗ್ ಬಾಸ್ ಗೆಲ್ಲೋದು ಅಂತ ಜನಾಭಿಪ್ರಾಯ ವ್ಯಕ್ತವಾಗಿತ್ತು, ಅದು ಈಗ ನಿಜವಾಗಿದೆ.

ಬಿಗ್ ಬಾಸ್ ಫಿನಾಲೆಗೆ 6 ಸ್ಪರ್ಧಿಗಳು ಆಯ್ಕೆಯಾಗಿದ್ದರು. ನಟ ಗಿಲ್ಲಿ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯ ಶೈವ, ರಘು ಮತ್ತು ಧನುಷ್ ಫಿನಾಲೆಗೆ ಆಯ್ಕೆಯಾಗಿದ್ದರು. ರವಿವಾರ ನಡೆದ ಫಿನಾಲೆ ಕಾರ್ಯಕ್ರಮದಲ್ಲಿ 6ನೇ ಎಲಿಮಿನೇಟ್ ಆಗಿ ಧನುಷ್‌ ಹೊರ ಬಂದರು. ಆನಂತರ ರಘು ಬಿಗ್ ಬಾಸ್ ಮನೆಯಿಂದ ಆಚೆ ಬಂದರು. 4ನೇ ಕಂಟೆಸ್ಟೆಂಟ್ ಆಗಿ ಕಾವ್ಯ ಮನೆಯಿಂದ ಆಚೆ ಬಂದರು. ಅಲ್ಲಿಂದ ಫಿನಾಲೆ ಇನ್ನಷ್ಟು ರೋಚಕ ತಿರುವು ಪಡೆದುಕೊಂಡಿತ್ತು.

ನೋಡುಗರ ಅಭಿಪ್ರಾಯದಂತೆ ಗಿಲ್ಲಿ, ಅಶ್ವಿನಿ ಗೌಡ ಮತ್ತು ರಕ್ಷಿತಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಮೂವರಲ್ಲಿ ಗೆಲ್ಲುವವರು ಯಾರು ? ಎಂಬ ಚರ್ಚೆ ಜೋರಾಗಿತ್ತು. ಇತ್ತ ಮೂರು ಸ್ಪರ್ಧಿಗಳ ಅಭಿಮಾನಿಗಳಲ್ಲೂ ಎದೆಬಡಿತ ಹೆಚ್ಚಿಸಿತ್ತು. ಏನೆ ಚರ್ಚೆ ನಡೆದರೂ, ಗಿಲ್ಲಿ ನಟನೆ ಗೆಲ್ಲೋದು ಪಕ್ಕಾ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು. ಕೊನೆಗೂ ಗಿಲ್ಲಿ ನಟನೆ ಟ್ರೋಫಿಗೆ ಮುತ್ತಿಕ್ಕಿ ವಿಜಯ ಮಾಲೆ ಧರಿಸಿದರು.

ಬಿಗ್ ಬಾಸ್ ಇತಿಹಾಸದಲ್ಲೆ ಈ ಪ್ರಮಾಣದಲ್ಲಿ ವೋಟುಗಳು ಬಂದಿರಲಿಲ್ಲ. ಕಳೆದ ಬಾರಿ ಹನುಮಂತ ಲಮಾಣಿಗೆ 5 ಕೋಟಿಗೂ ಅಧಿಕ ಮತಗಳು ಬಿದ್ದಿದ್ದವು. ಈ ಬಾರಿ ದಾಖಲೆಯ ರೀತಿಯಲ್ಲಿ ಮತದಾನವಾಗಿದೆ. ಹಾಗಾಗಿ ಗಿಲ್ಲಿ ನಟ ಅಚ್ಚರಿ ಎನ್ನುವಂತೆ ಗೆಲುವು ಸಾಧಿಸಿದ್ದಾರೆ.

Leave a Reply

Your email address will not be published. Required fields are marked *