ಕಲಬುರಗಿ ಜಿಲ್ಲಾ ಬಿಜೆಪಿ ನೂತನ ಪದಾಧಿಕಾರಿಗಳಲ್ಲಿ ಚಿತ್ತಾಪುರ ಮತಕ್ಷೇತ್ರದ ನಾಲ್ವರಿಗೆ ಅವಕಾಶ…..ಸುದ್ದಿ ಸಂಗ್ರಹ ಚಿತ್ತಾಪುರ
ಕಲಬುರಗಿ ಗ್ರಾಮಾಂತರ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಜಿಲ್ಲಾ ನೂತನ ಪದಾಧಿಕಾರಿಗಳಲ್ಲಿ ಚಿತ್ತಾಪುರ ಮತಕ್ಷೇತ್ರದ ನಾಲ್ಕು ಜನ ಮುಖಂಡರಿಗೆ ಅವಕಾಶ ನೀಡಲಾಗಿದೆ…..ಬಿಜೆಪಿ ಪಕ್ಷದ ತಾಲೂಕು ಪದಾಧಿಕಾರಿಗಳಾಗಿ, ಜಿಲ್ಲಾ ಪದಾಧಿಕಾರಿಗಳಾಗಿ ಇವರುಗಳು ಈ ಹಿಂದೆ ಕೂಡ ಸೇವೆ ಸಲ್ಲಿಸಿದ್ದಾರೆ. … ಶರಣುಜ್ಯೋತಿ ರಾವೂರ (ಉಪಾಧ್ಯಕ್ಷರು), ಬಸವರಾಜ ಬೆಣ್ಣೂರಕರ್ (ಪ್ರಧಾನ ಕಾರ್ಯದರ್ಶಿ), ಗಿರೀಶ್ ಭಜಂತ್ರಿ (ಕಾರ್ಯದರ್ಶಿ), ಚಂದ್ರಶೇಖರ ಪರಸರೆಡ್ಡಿ (ವಕ್ತಾರರು) ಅವರಿಗೆ ಅವಕಾಶ ಒದಗಿಬಂದಿದೆ. ….ಜಿಲ್ಲಾ ಪದಾಧಿಕಾರಿಗಳ ಸ್ಥಾನಕ್ಕೆ ಯಾರು ಅರ್ಜಿ ಸಲ್ಲಿಸಿಲ್ಲ. ಇವರ ಕ್ರಿಯಾಶೀಲತೆ ಮತ್ತು ಸಂಘಟನಾ ಚತುರತೆ ಗುರ್ತಿಸಿ ಪಕ್ಷವೇ ಜವಾಬ್ದಾರಿ ನೀಡಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಹೇಳಿದ್ದಾರೆ.