Uncategorized

ಸಿದ್ದರಾಮೇಶ್ವರರ ವಿಚಾರ ಸರ್ವಕಾಲಕ್ಕೂ ಪ್ರಸ್ತುತ

ಸುದ್ದಿ ಸಂಗ್ರಹ ಶಹಾಬಾದ

12ನೇ ಶತಮಾನದಲ್ಲಿದ್ದ ಬಹಳಷ್ಟು ಪಿಡುಗುಗಳು, ಅನಿಷ್ಟ
ಪದ್ಧತಿಗಳ ವಿರುದ್ಧ ಹೋರಾಡಿದ ವಚನ ಚಳುವಳಿಕಾರರಲ್ಲಿ
ಸಿದ್ದರಾಮೇಶ್ವರರು ಕೂಡ ಪ್ರಮುಖರು, ಅವರು ವಚನಗಳ
ಮೂಲಕ ನೀಡಿದ ವಿಚಾರಗಳು ಸರ್ವಕಾಲಕ್ಕೂ ಪ್ರಸ್ತುತ
ಎಂದು ತಹಸೀಲ್ದಾರ್ ನೀಲಪ್ರಭಾ ಬಬಲಾದ ಹೇಳಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,


ಬರಗಾಲದಂತಹ ಸಂದರ್ಭಗಳಲ್ಲಿ ಸಮಾಜಕ್ಕಾಗಿ ಕೆರೆ,
ಭಾವಿ ಮತ್ತು ಅರವಟ್ಟಿಗೆಗಳನ್ನು ನಿರ್ಮಿಸಿ ಜನಕಲ್ಯಾಣದ
ಕಾರ್ಯಗಳನ್ನು ಕೈಗೊಂಡರು, ಅದಕ್ಕಂತಲೇ ಅವರಿಗೆ
ಕರ್ಮಯೋಗಿ ಎಂತಲೂ ಕರೆಯುತ್ತಾರೆ ಎಂದರು.


ತಾಪಂ ಮಾಜಿ ಅಧ್ಯಕ್ಷ ಸುಭಾಷ ಚೌಧರಿ ಮಾತನಾಡಿ,
ಸಿದ್ದರಾಮೇಶ್ವರರು ತಮ್ಮ ವಚನ ಸಿದ್ಧಾಂತದ ಮೂಲಕ
ಸಮಾಜದಲ್ಲಿನ ಲಿಂಗ, ಜಾತಿ, ಮತ, ಪಂಥ,
ಪಂಗಡಗಳ ಭೇದಗಳನ್ನು ತೊಲಗಿಸುವಲ್ಲಿ ಹೋರಾಡಿ,
ವಚನಗಳ ಮೂಲಕ ಸಮಾಜದ ಸಾಮಾಜಿಕ ಪಿಡುಗು
ಹಾಗೂ ಅಂಕುಡೊಂಕುಗಳನ್ನು ತಿದ್ದುವ ಮೂಲಕ
ಆದರ್ಶರಾಗಿದ್ದಾರೆ, ಅವರ ತತ್ವ ಸಿದ್ಧಾಂತಗಳನ್ನು
ಪ್ರತಿಯೊಬ್ಬರು ಸಹ ಜೀವನದಲ್ಲಿ ಅಳವಡಿಸಿಕೊಳ್ಳಬೇಕು
ಎಂದು ಹೇಳಿದರು.

ನಾವೆಲ್ಲರೂ ಕರ್ಮಯೋಗಿ ಸಿದ್ದರಾಮೇಶ್ವರ
ರವರ ಸಾಮಾಜಿಕ ಕಳಕಳಿ, ತತ್ವ-ಸಿದ್ಧಾಂತ, ವಿಚಾರಧಾರೆ
ಮತ್ತು ಜೀವನದ ಸಂದೇಶಗಳನ್ನು ಅಳವಡಿಸಿಕೊಂಡಾಗ
ಮಾತ್ರ ಅವರ ಜಯಂತಿ ಆಚರಣೆಯು ನಿಜಕ್ಕೂ
ಅರ್ಥಪೂರ್ಣವಾಗಲಿದೆ ಎಂದರು.
ನಗರ ಪೊಲೀಸ ಠಾಣೆಯ ನೂತನ ಪಿಐ ಯಾಗಿ
ಅಧಿಕಾರ ಸ್ವೀಕರಿಸಿದ ಪರಶುರಾಮ ವನಂಜಕರ ರವರನ್ನು
ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ ಗುರುರಾಜ
ಸಂಗಾವಿ, ನಗರ ಪೊಲೀಸ ಠಾಣೆಯ ಪಿಐ ಪರಶುರಾಮ
ವನಂಜಕರ, ಬೋವಿ ವಡ್ಡರ ಸಮಾಜದ ಅಧ್ಯಕ್ಷ ರಾಜು
ಮೇಸ್ತ್ರಿ, ಕಳೋಳಿ ಕುಸಾಳೆ, ಕನಕಪ್ಪ ದಂಡಗುಳಕರ,
ರಮೇಶ ಪವಾರ,
ಭಾನು ಪವಾರ, ಸಂಜಯ ವೀಠಕರ, ಸಿದ್ರಾಮ
ಕುಸಾಳೆ, ಶ್ರೀನಿವಾಸ ನೇದಲಗಿ, ವೆಂಕಟೇಶ
ದಂಡಗುಳಕರ, ಸಿದ್ದಲಿಂಗ ಸೇರಿದಂತೆ ನೂರಾರು ಜನ
ಸಮಾಜದ ಬಾಂಧವರು ಭಾಗವಹಿಸಿದ್ದರು.

ತಾವು ನಿರ್ವಹಿಸುವ ಕಾಯಕವನ್ನು ಶ್ರದ್ಧೆಯಿಂದ ನಿಭಾಯಿಸಬೇಕು ಎನ್ನುವ ಸಂದೇಶ ನೀಡಿದ್ದ ಶಿವಯೋಗಿ ಸಿದ್ಧರಾಮೇಶ್ವರರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅನುಸರಿಸಿದಲ್ಲಿ ಆದರ್ಶ ಜೀವನ ನಡೆಸಲು ಸಾಧ್ಯ

ಗ್ರಾಮದ ಗ್ರಾಮ ಆಡಳಿತದಿಂದ ಶ್ರೀ ಶರಣ ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸಲಾಯಿತು.

ಶಹಾಬಾದ:ಕಾಯಕ ಯೋಗಿ ಶ್ರೀ ಸಿದ್ದರಾಮೇಶ್ವರರ ಅದರ್ಶ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಗರ ಪೊಲೀಸ್ ಠಾಣೆಯ ಪಿ.ಐ.ಪರಶುರಾಮ ವನಂಜಕರ ಹಾಗೂ ತಾಶಿಲ್ದಾರ ಕುಮಾರಿ ನೀಲಪ್ರಭ ಬಬಲಾದಿ ಶುಭ ಹಾರೈಸಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಬುಧವಾರ ಕಾಯಕ ಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿಯನ್ನು ಆಚರಣೆ ಜೊತೆಗೆ ಶಹಾಬಾದಿನ ಸರಕಾರಿ ವಿವಿಧ ಕಛೇರಿಗಳಲ್ಲಿ ಶ್ರೀ ಸಿದ್ದರಾಮೇಶ್ವರ ಜಯಂತಿಯನ್ನು ಆಚರಣೆ ಮಾಡಲಾಯಿತು.

ಶಹಾಬಾದ್ ಭೋವಿ ವಡ್ಡರ ಸಮಾಜದ ಅಧ್ಯಕ್ಷರಾದ ರಾಜು ಮೇಸ್ತ್ರಿ, ಸೇರಿದಂತೆ ಸಮಾಜದ ಮುಖಂಡರು ಶ್ರೀ ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಮಾಜದ ಮುಖಂಡರು ,ಭಗವಾನ ದಂಡಗುಲಕರ್,ಕನಕಪ್ಪ ದಂಡಗುಲಕರ್ , ಕಳ್ಳೊಳ್ಳಿ ಕುಸಾಳೆ, ಸಂಜು ವಿಟ್ಕರ್, ಸುಭಾಷ್ ಚೌದ್ರಿ , ಬಸವರಾಜ್ ನಿಂಬಲ್ಕರ್ ಅಂಬಾದಾಸ್ ಗುರೂಜಿ ,ಶ್ರೀನಿವಾಸ ನೇದಲಗಿ.ಸತೀಶ್.ಸಾಗರ್ ದಂಡುಗುಲಕರ್ , ಭಾನು ಪವರ್ , ಸಿದ್ದರಾಮ ಕುಸಾಳೆ, ರಮೇಶ್ ಪವರ್. ಜೈಕುಮಾರ್ ಚೌದರಿ, ಮುಕಿಂದ ದಂಡಗುಲ್ಕರ್, ಯಲ್ಲಾಲಿಂಗ ದಂಡಗುಲ್ಕರ್, ಅಶೋಕ್ ದೇವ್ಕರ್ ಉಪಸ್ಥಿತರಿದ್ದರು.

ಚಿತ್ರ ಸುದ್ದಿ: ಶಹಾಬಾದ ತಾಲೂಕಿನ ಬುಧವಾರ ಬೆಳಿಗ್ಗೆ ಕಾಯಕ ಯೋಗಿ ಶ್ರೀ ಸಿದ್ದರಾಮೇಶ್ವರ 854ನೇ ಜಯಂತೋತ್ಸವನ್ನು ನಗರ ಪೊಲೀಸ್ ಠಾಣೆಯ ಪಿ.ಐ.ಪರಶುರಾಮ ವನಂಜಕರ ಹಾಗೂ ತಾಶಿಲ್ದಾರ ಕುಮಾರಿ ನೀಲಪ್ರಭ ಬಬಲಾದಿ ಹಾಗೂ ಶಹಾಬಾದ್ ಭೋವಿ ವಡ್ಡರ ಸಮಾಜದ ಅಧ್ಯಕ್ಷರಾದ ರಾಜು ಮೇಸ್ತ್ರಿ. ಭಗವಾನ ದಂಡಗುಲಕರ್,ಕನಕಪ್ಪ ದಂಡಗುಲಕರ್ , ಕಳ್ಳೊಳ್ಳಿ ಕುಸಾಳೆ, ಸಂಜು ವಿಟ್ಕರ್, ಸೇರಿದಂತೆ ಸಮಾಜದ ಮುಖಂಡರು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.

ಸಿದ್ದರಾಮೇಶ್ವರರು ತಮ್ಮ ವಚನಗಳ ಮೂಲಕ
ಸಮಾಜದಲ್ಲಿದ್ದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ
ಮಾಡಿದ್ದಾರೆ. ಇವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ.12ನೇ ಶತಮಾನದಲ್ಲಿ ಸಿದ್ದರಾಮೇಶ್ವರರು ಜನರನ್ನು ಎಚ್ಚರಿಸುವ ಕೆಲಸ ಮಾಡಿದರು. ಸಮಾಜದಲ್ಲಿ ಬೇರೂರಿದ್ದ ಅನಿಷ್ಟ ಪಿಡುಗುಗಳನ್ನು ತೊಲಗಿಸಲು ಪ್ರಯತ್ನಿಸಿದರು. 68 ಸಾವಿರಕ್ಕೂ ಹೆಚ್ಚು ವಚನಗಳನ್ನು ಇವರು ರಚನೆ ಮಾಡಿರುವುದಾಗಿ ತಿಳಿದು ಬಂದಿದೆ’ ಎಂದರು.


ಬಿಲ್ ಕಲೆಕ್ಟರ್ ಬಿ.ರುದ್ರೇಶ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಬೋವಿ ಸಮಾಜದ ವಿ.ಹನುಮೇಶ ಮಾತನಾಡಿ ಶ್ರೀ ಸಿದ್ದರಾಮೇಶ್ವರರ ಜೀವನ ಚರಿತ್ರೆಯ ಕುರಿತು, ಅವರು ರಚಿಸಿದ ವಚನಗಳ ಸಾಹಿತ್ಯದ ಕುರಿತು ಮಾಹಿತಿ ನೀಡಿದರು. ಮತ್ತು ಗ್ರಾಮದ ಹುಲಿಗೆಮ್ಮ ದೇವಸ್ಥಾನದ ಹತ್ತಿರ ಸಿದ್ದರಾಮೇಶ್ವರರ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದ್ದು ಗ್ರಾಮಸ್ಥರು, ಮುಖಂಡರು, ಗ್ರಾಮ ಆಡಳಿತದವರು ಭಾಗವಹಿಸಬೇಕೆಂದು ಕೋರಿದರು. ಎಚ್. ಲಕ್ಷ್ಮಣ ಭಂಡಾರಿ ಮಾತನಾಡಿ, ಶ್ರೀ ಸಿದ್ದರಾಮೇಶ್ವರರು ಸುಮಾರು 68 ಸಾವಿರ ವಚನಗಳನ್ನು ರಚಿಸಿದ್ದಾರೆ ಎಂಬ ಮಾಹಿತಿ ಇದೆ. ಅಷ್ಟು ವಚನಗಳು ಲಭ್ಯವಾಗಿದ್ದಲ್ಲಿ ಅವರು ಮೇರು ಶರಣರ ಸಾಲಿನಲ್ಲಿ ಇರುತ್ತಿದ್ದರು. ಸರ್ಕಾರದ ಕೆಲಸ ದೇವರ ಕೆಲಸ ಎಂದು ನಾಣ್ಣುಡಿ ಹಾಕಿಕೊಂಡು ಸರ್ಕಾರದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡದಿರುವ ಜನರನ್ನು ಈಗ ಕಾಣಬಹುದು. ಆದರೆ ಕೆಲಸವನ್ನು ದೇವರೆಂದು ಭಾವಿಸಿ, ತಮ್ಮ ಕೆಲಸಗಳಲ್ಲಿ ದೇವರನ್ನು ಕಂಡವರು ಶರಣರು. ಅವರ ಚರಿತ್ರೆಗಳನ್ನು ಓದಿ ಅವರ ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಗ್ರಾ.ಪಂ.ಸದಸ್ಯ ಬಜಂತ್ರಿರಮೇಶ ಮಾತನಾಡಿ ಶರಣರ ಮಾರ್ಗದರ್ಶನ ಬಹಳ ಮಹತ್ವದ್ದು, ಅವರ ವಚನಗಳ ಮೂಲಕ ಉಪದೇಶಗಳ ಮೂಲಕ ನೀಡಿರುವ ಸಾರವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಕೊನೆಯಲ್ಲಿ ಗ್ರಾ.ಪಂ.ಕಾರ್ಯದರ್ಶಿ ಸಿದ್ದರಾಮ ರವರು ಮಾತನಾಡಿ, ಶರಣ ಸಿದ್ದರಮೇಶ್ವರರು ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ಭಕ್ತರು. ತಮ್ಮ ಬಾಲ್ಯದಲ್ಲಿಯೇ ದೇವರನ್ನು ಒಲಿಸಿಕೊಂಡ ಮಹಾಪುರುಷರು. ನಮ್ಮ ನಾಡಿನಲ್ಲಿ ಅನೇಕ ಶರಣ ಮಹಾಪುರುಷರು ತಮ್ಮದೇ ಆದ ಜೀವನ ವೈಶಿಷ್ಟ್ಯ ತೋರಿಸಿಕೊಟ್ಟಿದ್ದಾರೆ. ಅವರ ಜಯಂತಿಗಳಲ್ಲಿ ಎಲ್ಲರೂ ಒಗ್ಗೂಡಿ ಅವರ ವಚನಗಳ, ಉಪದೇಶಗಳ, ಅವರ ಜೀವನ ಚರಿತ್ರೆಯ ಕುರಿತಾದ ಮಾಹಿತಿಗಳನ್ನು ಹಂಚಿಕೊಳ್ಳಬಹುದು. ಶರಣರ ದಾರಿಯಲ್ಲಿ ಎಲ್ಲರೂ ಸಾಗಬೇಕು ಎಂದು ತಿಳಿಸಿದರು

Leave a Reply

Your email address will not be published. Required fields are marked *