ಸುದ್ದಿ ಸಂಗ್ರಹ ಶಹಾಬಾದ
ನಗರದ ಜೆಪಿ ಕಾಲೋನಿಯಲ್ಲಿ ಮಂಗಳವಾರ ಆದಿಶಕ್ತಿ ಶ್ರೀ ಮರಗಮ್ಮಾ ದೇವಿಯ 38ನೇ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತರ ಜಯ ಘೋಷಗಳ ಮಧ್ಯೆ ರಥೋತ್ಸವ ಜರುಗಿತು.
ಬೆಳಿಗ್ಗೆ ಪಲ್ಲಕ್ಕಿ ಮೆರವಣಿಯೊಂದಿಗೆ ಕಾಗಿಣಾ ನದಿಗೆ ಗಾಂಗಾ ಸ್ಥಳಕ್ಕೆ ಪ್ರಯಾಣ ಮಾಡಿ ಗಂಗಾ ಮಾತೆಗೆ ಬಾಗಿಣ ಅರ್ಪಿಸಿ ಮತ್ತು ಶ್ರೀದೇವಿಗೆ ಗಂಗಾಸ್ನಾನ ಮಾಡಲಾಯಿತು. ನಂತರ ಪೂರ್ಣಕುಂಭ, ಮಂಗಳವಾದ್ಯಗಳಿಗೆ ಪೂಜೆ ಸಲ್ಲಿಸಿ ದೇವಸ್ಥಾನಕ್ಕೆ ತಲುಪಿ ಶ್ರೀದೇವಿ ವಿಗ್ರಹಕ್ಕೆ ಜಲಾಭೀಷೇಕ, ಪಂಚಾಮೃತ ಅಭಿಷೇಕ, ರುದ್ರಾಭೀಷೇಕವನ್ನು ನಿಖಿಲ್ ಜೋಶಿ, ಭಾಸ್ಕರ ಜೋಶಿ ವೈದಿಕತ್ವದಲ್ಲಿ ಜರುಗಿಸಿದರು. ದೇವಿಗೆ ಅರ್ಚಕ ರಮೇಶ ಭಟ್ ಅಲಂಕಾರ, ನೈವೇದ್ಯ, ಮಹಾಮಂಗಳಾರತಿ ಮಾಡಿದರು.
ಸಂಜೆ 6 ಗಂಟೆಗೆ ತೋನಸನಹಳ್ಳಿ (ಎಸ್) ಸಂಗಮೇಶ್ವರ ಸಂಸ್ಥಾನ ಮಠದ ಪೂಜ್ಯ ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯ ಹಾಗೂ ಮಾಲಗತ್ತಿಯ ಪೂಜ್ಯ ಚನ್ನಬಸವ ಶರಣರು ರಥಕ್ಕೆ ಮಂಗಳಾರತಿ, ಪುಷ್ಪಾರ್ಚನೆ ಮಾಡುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಂಖಡೆ ಜಯಶ್ರೀ ಮತ್ತಿಮುಡ, ಭಾಗಿರತಿ ಗುನ್ನಾಪುರ, ದೇವಸ್ಥಾನ ಸಮಿತಿ ಅಧ್ಯಕ್ಷ ಆನಂದ ಹುಲಿಯಾರ, ದೇವಸ್ಥಾನ ಸಮಿತಿಯ ನಾಗಪ್ಪ ಹುಲಿಯಾರ, ರಘುನಾಥ ಕಂಬಾನೂರ, ಪ್ರಮುಖರಾದ ಮರಿಲಿಂಗ ಗಡೆಸೂರ, ಭೀಮರಾವ ಸಾಳೊಂಕೆ, ದುರ್ಗಪ್ಪ ಪವಾರ, ಸುಭಾಷ ಜಾಪೂರ, ಶ್ರೀಧರ ಜೋಶಿ, ಪವನ ಕುಲ್ಕರ್ಣಿ, ಸುಧೀರ ಶಿಂದೆ, ವಿನಾಯಕ ಶಿಂದೆ, ಅಶ್ವನ್ ಹುಲಿಯಾರ, ದಿನೇಶ ಗೌಳಿ, ಶರಣು ಕೌಲಗಿ, ಮಂಜು, ಪ್ರಶಾಂತ ವಾಲಿಕಾರ, ಸಾಯಿಕಿರಣ, ಕಿರಣ ಕುಮಾರ, ವಿವೇಕ ಹುಲಿಯಾರ, ಬಸವರಾಜ, ಧರ್ಮರಾಜ, ಅನೀಲ ಹಿಬಾರೆ ಸೇರಿದಂತೆ ಅನೇಕರು ಇದ್ದರು.
ಭಕ್ತಾಧಿಗಳಿಗೆ ಮಹಾಪ್ರಸಾದ ವಿತರಣೆ ಮಾಡಲಾಯಿತು, ಅಹೋರಾತ್ರಿ ಭಜನೆ ಮಾಡಲಾಯಿತು.