ಕಿಚ್ಚ ಸುದೀಪ್ಗೆ ವಿಶೇಷ ಗಿಫ್ಟ್ ನೀಡಲಿದ್ದಾರೆ ಮಲ್ಲಮ್ಮ
ಬೆಂಗಳೂರು: ಬಿಗ್ಬಾಸ್ ಖ್ಯಾತಿಯ ಮಲ್ಲಮ್ಮ ಐದು ವಾರಗಳ ನಂತರ ಮನೆಯಿಂದ ಆಚೆ ಬಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಮಲ್ಲಮ್ಮ ಯಾದಗಿರಿ ಜಿಲ್ಲೆಯ ಸುರಪುರದ ಸಣ್ಣ ಹಳ್ಳಿಯಿಂದ ಬಂದ ಸಾದಾ ಸೀದಾ ಮಹಿಳೆ ಮಲ್ಲಮ್ಮ. ಸುಮಾರು 15 ವರ್ಷಗಳ ಹಿಂದೆ ಜೀವನ ಕಟ್ಟಿಕೊಳ್ಳಲು ಕೂಲಿ ಕೆಲಸಕ್ಕೆ ಬಂದ ಮಲ್ಲಮ್ಮ ಇವತ್ತು ಇಡೀ ಕರ್ನಾಟಕ ಗುರ್ತಿಸುವ ಮಟ್ಟಿಗೆ ಆಗಿದ್ದಾರೆ. ಕಾರಣ ಬಿಗ್ಬಾಸ್ ಅನ್ನೋ ಖ್ಯಾತ ರಿಯಾಲಿಟಿ ಶೋ.
ಬಿಗ್ಬಾಸ್ ವೇದಿಕೆ ಮೇಲೆ ಮಲ್ಲಮ್ಮ ಅವರಿಗೆ ಲೆವೆನ್ (ಲೆಮೆನ್) ಟೀ ಯಾವಾಗ ಮಾಡಿಕೊಡ್ತೀರಾ ಅಂತಾ ಕಿಚ್ಚ ಸುದೀಪ್ (Sudeep) ತಮಾಷೆ ಮಾಡಿದ್ದರು. ಮಲ್ಲಮ್ಮ ಆಡುವ ಲೆವೆನ್ ಟೀ ಅನ್ನೋ ಮಾತು ಎಂತವರಿಗೂ ನಗೆ ಬರುಸುತ್ತೆ. ಇದೀಗ ಕಿಚ್ಚ ಸುದೀಪ್ ಅವರಿಗೆ ಮಲ್ಲಮ್ಮ ಉಡುಗೊರೆಯೊಂದನ್ನ ಕೊಡೋಕೆ ಸಿದ್ಧವಾಗಿದ್ದಾರೆ.
ಬಿಗ್ಬಾಸ್ ಮನೆಗೆ ಹೋಗಿ ಬಂದ ಮಲ್ಲಮ್ಮನಿಗೆ ಒಂದು ಆಸೆಯಂತೆ. ಬಿಗ್ಬಾಸ್ ಶೋನ ನಿರೂಪಕರಾದ ಕಿಚ್ಚ ಸುದೀಪ್ ಅವರಿಗೆ ಜಾಕೆಟ್ ಉಡುಗೊರೆ ನೀಡಲು ತಯಾರಿ ಮಾಡಿಕೊಂಡಿದ್ದಾರಂತೆ. ಮಲ್ಲಮ್ಮ ಅವರಿಗೆ ಕೆಲಸಕೊಟ್ಟ ಪಲ್ಲವಿ ಅವರು ಹಾಗೂ ಅವರ ತಂಡ ಈ ನಿಟ್ಟಿನಲ್ಲಿ ಜಾಕೆಟ್ ನೀಡೋಕೆ ತಯಾರಿ ಮಾಡಿಕೊಂಡಿದ್ದೇವೆ ಎಂದು ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಮಲ್ಲಮ್ಮ ಮಾಹಿತಿ ಹಂಚಿಕೊಂಡಿದ್ದಾರೆ.