ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ 70ನೇ ಕನ್ನಡ ರಾಜ್ಯೋತ್ಸವನ್ನು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಕನ್ನಡ ಮಾತೆ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹಣ ಮಾಡುವ ಮೂಲಕ ಮುಖಂಡರೊಂದಿಗೆ ಸಂಭ್ರಮದಿಂದ ಆಚರಿಸಿದರು.
ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ನಮ್ಮ ನಾಡಿನ ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ಅಸ್ಮಿತೆಯ ರೋಮಾಂಚಕ ಅಭಿವ್ಯಕ್ತಿಯೇ ಕನ್ನಡ ರಾಜ್ಯೋತ್ಸವ ಎಂದರು.
ನಮ್ಮ ರಾಜ್ಯ ರಚನೆಗೆ ಕಾರಣವಾದ ಹೋರಾಟಗಳಿಗೆ ಗೌರವ ಸಲ್ಲಿಸುವ, ನಮ್ಮ ನೆಲದ ಪರಂಪರೆಯನ್ನು ಆಚರಿಸಲು ನಾವೆಲ್ಲರು ಒಗ್ಗೂಡುವ ದಿನ. ಈ ಹಬ್ಬವು ನಮ್ಮ ರಾಜ್ಯದ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸುವ ವಿವಿಧತೆಯಲ್ಲಿ ಒಳಗೊಂಡಿದೆ, ಇದು ನಮ್ಮೆಲ್ಲರಿಗೆ ಹೆಮ್ಮೆಯ ಸಂಕೇತವಾಗಿದೆ ಎಂದರು.
ಈ ದಿನ ಮಾತ್ರವಲ್ಲದೆ ಇಡಿ ನವೆಂಬರ್ ತಿಂಗಳು ರಾಜ್ಯದ ಎಲ್ಲೆಡೆ ಮಾತ್ರವಲ್ಲದೆ ವಿದೇಶಗಳಲ್ಲು ಸಹ ಕನ್ನಡಿಗರು ಕನ್ನಡ ಭಾಷೆಯ ಹಬ್ಬ ಆಚರಿಸುವುದು, ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ನೆನೆದು ಮೆಲುಕುಹಾಕುವುದು ಸಾಮಾನ್ಯ. ಇದೊಂದು ತಿಂಗಳು ನಮಗೆಲ್ಲ ಸಡಗರದ ಹಬ್ಬ ಎಂದರು.
ಈ ಸಂಧರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಶರಣಗೌಡ ಚಾಮನೂರ, ಹರಿ ಹಲಾಂಡೆ, ಕಿಶನ ಜಾಧವ, ಅಶೋಕ ಪವಾರ, ಶಂಕರ ಕಾಶೆಟ್ಟಿ, ರಿಚರ್ಡ್ ಮಾರೆಡ್ಡಿ, ಮಲ್ಲಿಕಾರ್ಜುನ ಸಾತಖೇಡ, ಅಯ್ಯಣ್ಣ ದಂಡೋತಿ, ಆನಂದ ಇಂಗಳಗಿ, ಜಯಂತ ಪವಾರ, ರಮೇಶ ರಾಠೋಡ, ರವಿ ಚವ್ಹಾಣ, ಮಹೇಂದ್ರ ಕುಮಾರ ಪುಜಾರಿ, ವಿಶ್ವನಾಥ ಮಾಡಗಿ, ನಿರ್ಮಲ ಇಂಡಿ, ಉಮಾಭಾಯಿ ಗೌಳಿ, ಶರಣಮ್ಮ ಯಾದಗಿರಿ, ಶ್ರೀಶೈಲ ಪುರಾಣಿಕ, ಸಂಗಪ್ಪ ಇಂಡಿ, ಕುಮಾರ ಜಾಧವ, ಬಸವರಾಜ ಪಗಡಿಕರ ಸೇರಿದಂತೆ ಅನೇಕರು ಇದ್ದರು.