ಶಹಾಬಾದ: ನಗರದ ಕನ್ನಡ ಭವನದಲ್ಲಿ ಸೋಲಾಪುರ ರೈಲ್ವೆ ವಿಭಾಗೀಯ ರೈಲ್ವೆ ಬಳಕೆದಾರರ ಸಮಾಲೋಚನಾ ಸಮಿತಿಯ ಸದಸ್ಯರಾಗಿ ಆಯ್ಕೆಗೊಂಡ ಬಾಬುರಾವ ಪಂಚಾರ ಅವರಿಗೆ ಕಸಾಪದಿಂದ ಗೌರವ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಶರಣಬಸಪ್ಪ ಕೋಬಾಳ, ಕಾರ್ಯದರ್ಶಿ ಶರಣು ವಸ್ತ್ರದ, ಪತ್ರಕರ್ತ ವಾಸುದೇವ ಚವ್ಹಾಣ್, ಹಿರಿಯರಾದ ಶರಣಗೌಡ ಪಾಟೀಲ್ ಗೋಳಾ(ಕೆ), ಸಿದ್ಧಲಿಂಗಯ್ಯ ಹಿರೇಮಠ, ಕನಕಪ್ಪ ದಂಡಗುಲಕರ್ ಇದ್ದರು.