ಕಲಬುರಗಿ: ಕೆಲವೇ ಭಾಷೆಗಳು ಎಲ್ಲೆಡೆ ಬಳಕೆ ಮಾಡಿದರೆ ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಅವುಗಳನ್ನು ಮಾತೃಭಾಷೆಗೆ ಪರಿವರ್ತಿಸುವುದು ಅಗತ್ಯ. ಇದರಿಂದ ಮಾತೃಭಾಷೆ, ಸಾಹಿತ್ಯ ಬೆಳವಣಿಗೆಯಾಗುವುದರ ಜೊತೆಗೆ ಜನಸಾಮಾನ್ಯರಿಗೆ ಗ್ರಹಿಕೆ ಸುಲಭವಾಗುತ್ತದೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಶೆಟ್ಟಿ ಕಾಂಪೆಕ್ಸ್’ನಲ್ಲಿ ಬಸವೇಶ್ವರ ಪದವಿ ಕಾಲೇಜ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದಿಂದ ಮಂಗಳವಾರ ಏರ್ಪಡಿಸಲಾಗಿದ್ದ ‘ಅಂತರಾಷ್ಟ್ರೀಯ ಭಾಷಾಂತರ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನ ಭಾಷಾಂತಕಾರರಿಗೆ ಗೌರವ ಸಲ್ಲಿಸುವುದು ದಿನಾಚರಣೆ ಉದ್ದೇಶವಾಗಿದೆ. ವಿವಿಧ ದೇಶ, ಸಂಸ್ಕೃತಿ ಬೆಸೆಯುವಲ್ಲಿ ಭಾಷಾಂತಕಾರರ ಪಾತ್ರ ಪ್ರಮುಖವಾಗಿದೆ. ಮೂರನೇ ಶತಮಾನದ ಜೆರೋಮ್ ಬೈಬಲ್ ಅವರ ಸ್ಮರಣಾರ್ಥ ಈ ದಿನ ಆಚರಿಸಲಾಗುತ್ತದೆ ಎಂದರು.
ಕಸಾಪ ಉತ್ತರ ವಲಯದ ಕಾರ್ಯದರ್ಶಿ ನಾಗೇಶ್ ತಿಮಾಜಿ ಮಾತನಾಡಿ, ವಿದ್ಯಾರ್ಥಿ ದಿಸೆಯಿಂದಲೇ ಪಠ್ಯದ ಜೊತೆ ಪಠ್ಯೇತರ ವಿಷಯಗಳನ್ನು ಅಧ್ಯಯನ ಮಾಡಬೇಕು. ಇದರಿಂದ ನಿಮ್ಮ ವ್ಯಕ್ತಿತ್ವ ವಿಕಸನ ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಕಾಲೇಜಿನ ಉಪನ್ಯಾಸಕರಾದ ರಾಜೇಶ್ವರಿ ಮಲ್ಲದ್, ಅನ್ನಪೂರ್ಣ ಪಸಾರ, ಸಂಗೀತಾ ಕಣ್ಣಿ, ಸೇವಕಿ ಸಾವಿತ್ರಿ, ಪ್ರಮುಖರಾದ ಶಿವಶಂಕರ, ಸಾಕ್ಷಿ, ಆಶಾ, ಭಾಗ್ಯಶ್ರೀ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.