ಬೆಂಗಳೂರು: ರಾಜ್ಯ ಸರ್ಕಾರವು 11 ಐಎಎಸ್ ಅಧಿಕಾರಿಗಳಿಗೆ ಹಾಲಿ ಇರುವ ಹುದ್ದೆಗಳ ಜೊತೆಗೆ ಹೆಚ್ಚುವರಿಯಾಗಿ ಪ್ರಭಾರ ಜವಾಬ್ದಾರಿ ನೀಡಿ ಆದೇಶ ಹೊರಡಿಸಿದೆ.
ಮೋಹನರಾಜ್ ಕೆ.ಪಿ – ವ್ಯವಸ್ಥಾಪಕ ನಿರ್ದೇಶಕರು, ಕೃಷ್ಣಾ ಜಲ ಭಾಗ್ಯ ನಿಗಮ ಇವರಿಗೆ ಆಯುಕ್ತರು, ಕೃಷ್ಠಾ ಮೆಲ್ದಂಡೆ ಯೋಜನೆಯ ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ.
ಶಿವನಗೌಡ ಪಾಟೀಲ – ಆಯುಕ್ತರು, ಕೃಷಿ ಇಲಾಖೆ ಇವರಿಗೆ ತೋಟಗಾರಿಕೆ ಮತ್ತು ರಾಷ್ಟ್ರೀಯ ತೋಟಗಾರಿಕಾ ಮಿಷನ್ನ ನಿರ್ದೇಶಕ.
ಡಾ.ಗೋಪಾಲ ಕೃಷ್ಣ ಎಚ್.ಎನ್ – ಆಯುಕ್ತರು, ಕಾರ್ಮಿಕ ಇಲಾಖೆ ಇವರಿಗೆ ಆಯುಕ್ತರು, ಇಎಸ್ಐಎಸ್ ಕಾರ್ಮಿಕ ಇಲಾಖೆ.
ಡಾ.ರಾಜೇಂದ್ರ ಕೆ.ವಿ – ಆಯುಕ್ತರು, ಬೆಂಗಳೂರು ಪಶ್ಚಿಮ ನಗರ ಪಾಲಿಕೆ, ಇವರಿಗೆ ವ್ಯವಸ್ಥಾಪಕ ನಿರ್ದೇಶಕರು, ಪ್ರವಾಸೋದ್ಯಮ ಅಭಿವೃದ್ಧಿ ನಿಗಮ.
ಮುಲ್ಲೈ ಮುಗಿಲನ್ – ಆಯುಕ್ತರು, ಮುದ್ರಾಂಕ ಮತ್ತು ನೋಂದಣಿ ಇಲಾಖೆ, ಇವರಿಗೆ ಕಂದಾಯ ಆಯುಕ್ತರು (ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಮತ್ತು ಸಾಮಾಜಿಕ ಭದ್ರತೆ).
ವೆಂಕಟ್ ರಾಜ – ಜಿಲ್ಲಾಧಿಕಾರಿ ಕೊಡಗು, ಇವರಿಗೆ ಪ್ರಾದೇಶಿಕ ಆಯುಕ್ತರು ಮೈಸೂರು ವಲಯ.
ನಳಿನಿ ಅತುಲ್ – ಕಾರ್ಯದರ್ಶಿ,ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ದಿ ಮಂಡಳಿ ಇವರಿಗೆ ಹೆಚ್ಚುವರಿ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಕಲಬುರಗಿ.
ಲೊಖಂಡೆ ಸ್ನೇಹಲ್ ಸುಧಾಕರ್- ಹೆಚ್ಚುವರಿ ಆಯುಕ್ತರು, ಬೆಂಗಳೂರು ಪೂರ್ವ ನಗರ ಪಾಲಿಕೆ ಇವರಿಗೆ ವ್ಯವಸ್ಥಾಪಕ ನಿರ್ದೆಶಕರು, ಕರ್ನಾಟಕ ವಿದ್ಯುತ್ ಕಾರ್ಖಾನೆ (ಕವಿಕಾ).
ಭರತ್ ಎಸ್ – ನಿರ್ದೆಶಕರು, ಪಿಯು ಶಿಕ್ಷಣ ಇಲಾಖೆ ಇವರಿಗೆ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಹುದ್ದೆ.
ರಾಹುಲ್ ಶರಣಪ್ಪ ಸಂಕನೂರು – ಹೆಚ್ಚುವರಿ ಆಯುಕ್ತರು, ಬೆಂಗಳೂರು ಕೇಂದ್ರ ನಗರ ಪಾಲಿಕೆ ಇವರಿಗೆ ಕೆಪಿಎಸ್ಸಿಯ ಪರೀಕ್ಷಾ ಜಂಟಿ ನಿರ್ದೇಶಕ ಹುದ್ದೆ.
ದಲ್ಜೀತ್ ಕುಮಾರ್ – ಉಪಕಾರ್ಯದರ್ಶಿ, ಐಟಿ-ಬಿಟಿ, ಇವರಿಗೆ ಪ್ರಭಾರವಾಗಿ ನಿರ್ದೇಶಕರು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ.