ಹೊಸದಿಲ್ಲಿ: ಸತತ ಅವಧಿಗೆ ಪ್ರಧಾನಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ ಹೆಗ್ಗಳಿಕೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರಕ್ಕೆ ಇಂದಿರಾ ಗಾಂಧಿ ದಾಖಲೆ ಮುರಿಯಲಿದ್ದಾರೆ. ಶುಕ್ರವಾರಕ್ಕೆ ಪ್ರಧಾನಿಯಾಗಿ 4,078 ದಿನಗಳು ಪೂರೈಸಲಿದ್ದಾರೆ. ಈ ಮೂಲಕ ಇಂದಿರಾ ಅವರ 4,077 ದಿನಗಳ ದಾಖಲೆ ಮುರಿಯಲಿದ್ದಾರೆ.
ಇಂದಿರಾ ಗಾಂಧಿ ಅವರು 1966 ಜನವರಿ 24ರಿಂದ 1977 ಮಾರ್ಚ್ 24ರ ವರೆಗೆ ಸತತ ಪ್ರಧಾನಿ ಹುದ್ದೆಯಲ್ಲಿದ್ದರು. ಆ ದಾಖಲೆ ಈಗ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಗೆ ವರ್ಗಾವಣೆಯಾಗಲಿದೆ. ಅತಿ ದೀರ್ಘ ಅವಧಿಗೆ ಪ್ರಧಾನಿಯಾದ ದಾಖಲೆ ಮೊದಲ ಪ್ರಧಾನಿ ಜವಾಹರ ನೆಹರು ಅವರ ಹೆಸರಿನಲ್ಲಿದೆ. ಅವರು ಸತತ 3 ಅವಧಿಗೆ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.