ಚಿತ್ತಾಪುರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುವ ಚುನಾವಣೆ ಹಾಗೂ ಮತದಾನದ ಅರಿವು ಮೂಡಿಸಲು ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾದ ಶಾಲಾ ಸಂಸತ್ ಚುನಾವಣೆಯಲ್ಲಿ ಮಕ್ಕಳು ಗೆದ್ದು ಗೆಲುವಿನ ನಗೆ ಬೀರಿದರು.
ಸಮೀಪದ ರಾವೂರ ಗ್ರಾಮದ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಮಕ್ಕಳ ಅಣಕು ಚುನಾವಣೆಯಲ್ಲಿ ಅಮೂಲ್ಯವಾದ ಮತವನ್ನು ಮತಯಂತ್ರದಲ್ಲಿ ಚಲಾಯಿಸಿ ತರಗತಿ ನಾಯಕರನ್ನು ಆಯ್ಕೆ ಮಾಡಿಕೊಂಡರು. ಒಟ್ಟು 10 ಮತ ಕೇಂದ್ರಗಳಲ್ಲಿ ನಡೆದ ಚುನಾವಣೆಯಲ್ಲಿ 520 ಮತದಾರರ ಪೈಕಿ 500 ಮಕ್ಕಳು ತಮ್ಮ ಮತ ಚಲಾಯಿಸಿದರು. ಶೇ.96 ರಷ್ಟು ಮತದಾನವಾಯಿತು. ಬಹಳ ಶಿಸ್ತು ಬದ್ಧವಾಗಿ ಸಾರ್ವತ್ರಿಕ ಚುನಾವಣೆ ನಡೆಯುವಂತೆ ನಾಮಪತ್ರ ಸಲ್ಲಿಕೆಯಿಂದ ಹಿಡಿದು ಪ್ರಚಾರ, ಮತ ಎಣಿಕೆವರೆಗೆ ಚುನಾವಣಾ ಅಧಿಕಾರಿಯಾಗಿ ಸಮಾಜ ವಿಜ್ಞಾನ ಶಿಕ್ಷಕ ಸಿದ್ದಲಿಂಗ ಬಾಳಿ ಚುನಾವಣೆಯ ಎಲ್ಲಾ ಪ್ರಕ್ರಿಯೆಗಳನ್ನು ಪಾಲಿಸಿ ಮಕ್ಕಳಿಗೆ ಅರಿವು ಮೂಡಿಸಿದರು. 20 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 47 ಅಭ್ಯರ್ಥಿಗಳು ಸ್ಪರ್ದಿಸಿದ್ದರು. ತರಗತಿವಾರು ಮಕ್ಕಳು ಗುರುತಿನ ಚೀಟಿಯೊಂದಿಗೆ ಸಾಲಾಗಿ ನಿಂತು ಮತ ಚಲಾಯಿಸುವ ಹಕ್ಕನ್ನು ಚಲಾಯಿಸಿದರು. ಶಾಲೆಯ ಎನ್’ಸಿಸಿ ತಂಡ ಚುನಾವಣೆ ಪ್ರಕ್ರಿಯೆ ಶಾಂತಿಯುತವಾಗಿ ನಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮವಾಗಿ ಮಾತ ಎಣಿಕೆಯಲ್ಲಿ ಗೆದ್ದ ಮಕ್ಕಳು ವಿಜಯೋತ್ಸವ ಆಚರಿಸಿದರು.

ಸಂಸ್ಥೆಯ ಅಧ್ಯಕ್ಷ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಪ್ರತಿಯೊಂದು ಮತ ಕೇಂದ್ರಕ್ಕೆ ಭೇಟಿ ನೀಡಿ ಚುನಾವಣಾ ಪ್ರಕ್ರಿಯೆಯನ್ನು ವೀಕ್ಷಿಸಿ ಮಕ್ಕಳಿಗೆ ಹುರಿದುಂಬಿಸಿದರು, ಹಾಗೆ ಚುನಾವಣೆ ಮಹತ್ವ ಕುರಿತು ಹೇಳಿದರು.
ಪ್ರಾಚಾರ್ಯ ಕೆ.ಐ ಬಡಿಗೇರ್ ಪ್ರಸ್ತುತ ಚುನಾವಣೆಗಳಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಿದರು.

ಶಾಲೆಯ ಸರ್ವ ಸಿಬ್ಬಂದಿ ಬಳಗ ಮತಗಟ್ಟೆಯ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು.
ಮುಖ್ಯಗುರು ವಿದ್ಯಾಧರ ಖಂಡಾಳ ಚುನಾವಣೆಯ ಮೇಲುಸ್ತುವಾರಿ ವಹಿಸಿದ್ದರು.
ಸಿದ್ದಲಿಂಗ ಬಾಳಿ (ಶಿಕ್ಷಕರು ) ಮಕ್ಕಳಿಗೆ ಚುನಾವಣೆಗಳು ಯಾವ ರೀತಿ ನಡೆಯುತ್ತವೆ ಎನ್ನುವುದನ್ನು ಶಾಲಾ ಹಂತದಲ್ಲೆ ತಿಳಿಸುವ ಪ್ರಯತ್ನ ಇದಾಗಿದೆ. ಚುನಾವಣೆಯ ಎಲ್ಲಾ ಪ್ರಕ್ರಿಯೆಗಳಲ್ಲಿ ಶಿಕ್ಷಕರ ಸಹಕಾರ ಮತ್ತು ಮಕ್ಕಳ ಸಹಭಾಗಿತ್ವ ಮೆಚ್ಚುವಂತದ್ದು. ಪೂಜ್ಯರ ಮತ್ತು ಆಡಳಿತ ಮಂಡಳಿ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾಗ್ಯಶ್ರೀ ತಂದೆ ಈಶ್ವರಾಜ (ಗೆದ್ದ ವಿದ್ಯಾರ್ಥಿನಿ)
ನಮಗೆ ಮೊದಲ ಬಾರಿ ಮತ ಚಲಾಯಿಸಿರುವದು ಖುಷಿಯಾಗಿದೆ. ಹೆಚ್ಚಿನ ಮತ ಪಡೆದು ಸಹಪಾಠಿಗಳು ಆಯ್ಕೆ ಮಾಡಿದ್ದಾರೆ. ನನ್ನ ಕರ್ತವ್ಯವನ್ನು ಪ್ರಮಾಣಿಕತೆಯಿಂದ ನಿರ್ವಹಿಸಿತ್ತೆನೆ. ಈ ಚುನಾವಣೆಗಳಿಂದ ನಾವು ಬಹಳಷ್ಟು ಕಲಿತಿದ್ದವೆ ಎಂದರು.