ಒಂದು ಅಂಕಕ್ಕಾಗಿ ಮತ್ತೊಮ್ಮೆ ಪರೀಕ್ಷೆ ಬರೆದು 625ಕ್ಕೆ 625 ಅಂಕ ಪಡೆದು ಟಾಪರ್ ಆದ ಸಂಜನಾ

ರಾಜ್ಯ ಸುದ್ದಿ ಸಂಗ್ರಹ ವಿಶೇಷ

ಶಿವಮೊಗ್ಗ: ಒಂದು ಅಂಕದಿಂದ ಎಸ್ಸೆಸ್ಸೆಲ್ಸಿಯಲ್ಲಿ ಟಾಪರ್ ಕನಸು ತಪ್ಪಿಸಿಕೊಂಡಿದ್ದ ಹುಡುಗಿ ಅದೆ ಒಂದು ಅಂಕಕ್ಕಾಗಿ ಮತ್ತೊಮ್ಮೆ ಪರೀಕ್ಷೆ ಎದುರಿಸಿ 625ಕ್ಕೆ 625 ಅಂಕ ಪಡೆದು ವಿಶೇಷ ಸಾಧನೆ ಮಾಡಿದ್ದಾಳೆ.

ಶಿವಮೊಗ್ಗದ ಆದಿಚುಂಚನಗಿರಿ ಪ್ರೌಢ ಶಾಲೆಯ ಸಂಜನಾ ಎಸ್ ಮೊದಲ ಪರೀಕ್ಷೆಯಲ್ಲಿ 624 ಅಂಕ ಪಡೆದಿದ್ದಳು. ಬಯಲಾಜಿಯಲ್ಲಿ ಒಂದು ಅಂಕ ಕಟ್ ಆಗಿತ್ತು.

“ಥ ಇನ್ಫರ‍್ಮೇಶನ್ ಸೋರ್ಸ್ ಫಾರ್ ಮೇಕಿಂಗ್ ಪ್ರೋಟಿನ್ ಇನ್ ದ ಸೆಲ್ಸ್ ಇಸ್” ಎಂಬ ಬಹು ಆಯ್ಕೆಯ ಪ್ರಶ್ನೆಗೆ ಕೇಳಲಾಗಿತ್ತು. ಅದಕ್ಕೆ ಜೀನ್, ಕ್ರೋಮೋಜೋಮ್, ಡಿಎನ್‌ಎ, ರೈಬೊಝೋಮ್ ಎಂಬ ನಾಲ್ಕು ಆಯ್ಕೆ ಇತ್ತು. ಜೀನ್ ಸಹ ಪ್ರೋಟಿನ್ ಸೆಲ್ ಎಂದು ಸಂಜನಾ ಉತ್ತರ ನೀಡಿದ್ದಳು. ಆದರೆ ಸರಿಯಾದ ಉತ್ತರ ಡಿಎನ್‌ಎ ಎಂದಿತ್ತು. ಜೀನ್ ಸಹ ಸರಿ ಉತ್ತರ ಎಂಬುದು ಅನೇಕರ ವಾದ. ಆದರೂ ಒಂದು ಅಂಕದಿಂಂದ ರಾಜ್ಯಕ್ಕೆ ಟಾಪರ್ ಆಗುವ ಅವಕಾಶದಿಂದ ವಂಚಿತಳಾದ ಸಂಜನಾ ಮತ್ತೆ ಬಯಾಲಾಜಿ ಪರೀಕ್ಷೆ ಬರೆದು 80ಕ್ಕೆ 80 ಅಂಕ ಪಡೆದಿದ್ದಾಳೆ. ಈ ಮೂಲಕ 625ಕ್ಕೆ 625ಕ್ಕೆ ಅಂಕ ಪಡೆದ ಸಾಧನೆ ಮಾಡಿದ್ದಾಳೆ.

ಸಂಜನಾ ತಂದೆ ಸುರೇಶ್ ಎಂ ಪೊಲೀಸ್ ಇಲಾಖೆಯಲ್ಲಿ ಎಸ್‌ಎಸ್‌ಐ ಕೆಲಸ ಮಾಡುತ್ತಿದ್ದ ತಾಯಿ ರೇಖಾ ಎಸ್ ಗೃಹಿಣಿಯಾಗಿದ್ದಾರೆ.

625ಕ್ಕೆ 625 ಪಡೆದವರಿಗೆ ಸಿಎಂ ಅವರಿಂದ, ಸಂಘ ಸಂಸ್ಥೆಗಳಿಂದ ಸನ್ಮಾನ ಸಿಕ್ಕಿದೆ. ಕಳೆದ ಬಾರಿಯೇ ಅವರಿಗೆ ಪೂರ್ಣ ಅಂಕ ಬರಬೇಕಿತ್ತು. ಮತ್ತೊಮ್ಮೆ ಪರೀಕ್ಷೆ ಎದುರಿಸಿ ಪೂರ್ಣ ಅಂಕ ಪಡೆದವರಿಗೆ ಸನ್ಮಾನ ಬೇಕಿದೆ ಎನ್ನುತ್ತಾರೆ ಶಾಲೆಯ ಆಡಳಿತ ಮಂಡಳಿ.

Leave a Reply

Your email address will not be published. Required fields are marked *