ಚಿತ್ತಾಪುರ: ವಿಶ್ವಗುರು ಬಸವೇಶ್ವರ ಮೂರ್ತಿಯ ಜೊತೆಗೆ ತತ್ವ ಸಿದ್ಧಾಂತಗಳು ಎಲ್ಲೆಡೆ ಪಸರಿಸುವ ಕೆಲಸ ಪ್ರತಿಯೊಬ್ಬರೂ ಮಾಡಬೇಕಿದೆ ಎಂದು ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಹೇಳಿದರು.
ಸಮೀಪದ ರಾವೂರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವಗುರು ಬಸವೇಶ್ವರರ 892ನೇ ಜಯಂತ್ಯೋತ್ಸವ ಹಾಗೂ ಬಸವೇಶ್ವರ ಮೂರ್ತಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾವೂರ ಗ್ರಾಮದಲ್ಲಿ ಮೂರ್ತಿ ಅನಾವರಣ ಮಾಡಿದ್ದು ಖುಷಿಯ ಸಂಗತಿ. ಆದರ ಜೊತೆಗೆ ಮೂರ್ತಿ ಅನಾವರಣ ಸಮಿತಿಯವರು ನಿತ್ಯವೂ ಈ ಮೂರ್ತಿಯ ಪರಿಸರ ಸ್ವಚ್ಛವಾಗಿಟ್ಟು ಪೂಜೆ ಮಾಡಬೇಕು. ಮಕ್ಕಳಿಗಾಗಿ ವಚನ ಸ್ಪರ್ಧೆ ಹಮ್ಮಿಕೊಳ್ಳಬೇಕು. ವಿಶೇಷ ಉಪನ್ಯಾಸಗಳ ಮುಲಕ ಶರಣರ ತತ್ವ ಸಿದ್ಧಾಂತಗಳನ್ನು ಜೀವಂತವಾಗಿಡುವ ಕೆಲಸವಾಗಬೇಕು ಎಂದು ಕಿವಿಮಾತು ಹೇಳಿದರು.
ನೇತೃತ್ವ ವಹಿಸಿದ್ದ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ನಮ್ಮೆಲ್ಲರಿಗೂ ಕಾಯಕವೆ ಕೈಲಾಸವಾಗಬೇಕು. ಯುವಕರು ಪ್ರತಿಯೊಬ್ಬರು ಕಾಯಕ ಮಾಡಬೇಕು, ದಾಸೋಹ ಮನೋಭಾವ ರೂಢಿಸಿಕೊಳ್ಳಬೇಕು, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ ಪಾಟೀಲ, ಮಾಜಿ ಜಿ.ಪಂ ಸದಸ್ಯ ಶಿವಾನಂದ ಪಾಟೀಲ. ಮುಖಂಡರಾದ ನಾಗರೆಡ್ಡಿ ಪಾಟೀಲ ಕರದಾಳ, ಶ್ರೀನಿವಾಸ ಸಾಗರ ಮಾತನಾಡಿದರು.
ಮಾಜಿ ತೊಗರಿ ಮಂಡಳಿ ಅಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ, DYSP ಶಂಕರಗೌಡ ಪಾಟೀಲ್ ವೇದಿಕೆ ಮೇಲಿದ್ದರು. ಸಿದ್ದಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.
ರಾವೂರ ಸಿದ್ದಲಿಂಗೇಶ್ವರ ಸಂಸ್ಥಾನ ಮಠದಿಂದ ಬಸವೇಶ್ವರ ವೃತ್ತದ ವರೆಗೆ ಅದ್ದೂರಿಯಾಗಿ ಮೆರವಣಿಗೆ ನಡೆಯಿತು. ವಾಡಿ ಪಿಎಸ್’ಐ ತಿರುಮಲೇಶ್ ಅವರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.
ಪ್ರಮುಖರಾದ ಡಾ. ಗುಂಡಣ್ಣ ಬಾಳಿ, ಶಿವಲಿಂಗಪ್ಪ ವಾಡೆದ, ಅಣ್ಣಾರಾವ ಬಾಳಿ, ಗುರುನಾಥ ಗುದಗಲ್, ತಿಪ್ಪಣ್ಣ ವಗ್ಗರ್, ಸಾಹೇಬಗೌಡ ತುಮಕೂರ, ಈಶ್ವರ ಬಾಳಿ, ಬಸವರಾಜ ಮಾಕಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕ ಸಿದ್ದಲಿಂಗ ಬಾಳಿ ಸ್ವಾಗತಿಸಿದರು, ಶರಣು ಜ್ಯೋತಿ ವಂದಿಸಿದರು.