ಚಿಕ್ಕೋಡಿ: ಮೇಕೆ, ಎಮ್ಮೆ, ಹಸು ದುಬಾರಿ ಹಣಕ್ಕೆ ಮಾರಾಟವಾಗಿರುವದು ಕೇಳಿರಬಹುದು. ಆದರೆ ಬಾಗಲಕೋಟೆ ಜಿಲ್ಲೆಯಲ್ಲಿ ಕೋಣವೊಂದು1.15 ಲಕ್ಷ ರೂ.ಗೆ ಮಾರಾಟವಾಗುವ ಮೂಲಕ ಸುದ್ದಿ ಮಾಡಿದೆ.
ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ರಾಯಪ್ಪ ಚೌಗಲಾ ಎಂಬುವವರು ಸಾಕಿದ್ದ ಎರಡು ವರ್ಷದ ಕೋಣ ಬರೋಬ್ಬರಿ 1.15 ಲಕ್ಷ ರೂ.ಗೆ ಮಾರಾಟವಾಗಿದೆ.

ಅಂದಾಜು 8.50 ಕ್ವಿಂಟಾಲ್ ತೂಕ ಹೊಂದಿರುವ ಕೋಣ ಸಂತಾನೋತ್ಪತ್ತಿಗೆ ಹೆಸರು ಮಾಡಿದೆ. ಕೋಣಕ್ಕೆ ದಿನನಿತ್ಯ 400 ರಿಂದ 500 ರೂ ಖರ್ಚು ಮಾಡುತ್ತಿದ್ದರು.
ಇವರಿಗೆ ಕೋಣದ ಮೇಲೆ ಬಹಳ ಪ್ರೀತಿ ಇತ್ತು, ಮಾರಲು ಇಷ್ಟವಿರಲಿಲ್ಲ. ಆದರೆ ಮೇವಿನ ಕೊರತೆಯಿಂದ ಬಾಗಲಕೋಟೆ ಜಿಲ್ಲೆಯ ರಬಕವಿ ಪಟ್ಟಣದ ಜಾನವಾರಗಳ ವ್ಯಾಪರಸ್ಥರಿಗೆ ಮಾರಾಟ ಮಾಡಿದ್ದಾರೆ.