ಚಿತ್ತಾಪುರ: ಮಾತೃಭಾಷೆ ಸಂಸ್ಕೃತಿ, ಪರಂಪರೆಯ ಕುರುಹುವಾಗಿದೆ ಇದರ ರಕ್ಷಣೆ ಅಗತ್ಯವಾಗಿದೆ ಎಂದು ಚಿಂತಕ ನರಸಪ್ಪ ಬಿರಾದಾರ ದೇಗಾಂವ ಹೇಳಿದರು.
ತಾಲೂಕಿನ ಕನಗನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ “ಅಂತಾರಾಷ್ಟ್ರೀಯ ಮಾತೃಭಾಷೆ ದಿನಾಚರಣೆ” ಉದ್ಘಾಟಿಸಿ ಮಾತನಾಡಿದ ಅವರು, ಮಾತು ಮನುಷ್ಯನಿಗೆ ದೇವರು ನೀಡಿದ ವಿಶೇಷ ವರವಾಗಿದೆ. ಇದರಿಂದ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗಿದೆ ಎಂದರು.
ಸಮಾಜ ಸೇವಕ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ಮಾತೃಭಾಷೆಯನ್ನು ಹೃದಯದಿಂದ ಪ್ರೀತಿಸಿ, ಗೌರವಿಸಬೇಕು. ಇದು ರಕ್ತ ಸಂಬಂಧದಿಂದ ಹುಟ್ಟಿ ಬೆಳೆಯುತ್ತದೆ. ಇದನ್ನು 2000ರಿಂದ ಪ್ರಥಮ ಬಾರಿಗೆ ಆಚರಿಸಲು ಪ್ರಾರಂಭಿಸಲಾಯಿತು ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ, ಕಸಾಪ ಕಲಬುರಗಿ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್. ಬಿರಾದಾರ, ಶಿಕ್ಷಕ ಅಣ್ಣಾರಾಯ ಎಚ್.ಮಂಗಾಣೆ, ಪ್ರಮುಖರಾದ ಸುಜಯ ಎಸ್.ವಂಟಿ, ಅಭಿಷೇಕ ಶಾವರೆ, ಶಾಲೆಯ ಶಿಕ್ಷಕರಾದ ಸಂಗೀತಾ, ಮರೆಮ್ಮ, ಮಲ್ಲಿಕಾರ್ಜುನ ನಾಟಿಕಾರ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.